ಲಂಡನ್: ಭಾರತದಲ್ಲಿ ಸಾಲ ಮಾಡಿ ಬ್ರಿಟನ್ ಗೆ ಪರಾರಿಯಾಗಿರುವ ಮದ್ಯ ದೊರೆ ವಿಜಯ್ ಮಲ್ಯ ಮತ್ತೊಮ್ಮೆ ತಮ್ಮ ಹೇಳಿಕೆಯ ಮೂಲಕ ಸುದ್ದಿಯಾಗಿದ್ದಾರೆ. ಭಾರತಕ್ಕೆ ಭೇಟಿ ನೀಡುವಂತಹದ್ದು ಏನೂ ಇಲ್ಲ ಎಂದಿದ್ದಾರೆ.
ಹಲವು ದಿನಗಳಿಂದ ವಿದೇಶದಲ್ಲಿ ನೆಲೆಸಿರುವ ಮಲ್ಯಗೆ ಭಾರತಕ್ಕೆ ಬರಬೇಕೆನಿಸುತ್ತಿದೆಯೇ? ಎಂದು ಕೇಳಿದ್ದಕ್ಕೆ ಅಲ್ಲಿ ಮಿಸ್ ಮಾಡಿಕೊಳ್ಳುವಂತಹದ್ದು ಏನೂ ಇಲ್ಲ. ನಾನು ಎಳ್ಳಷ್ಟೂ ಭಾರತವನ್ನು ಮಿಸ್ ಮಾಡಿಕೊಳ್ಳುತ್ತಿಲ್ಲ ಎಂದಿದ್ದಾರೆ.
‘ನನ್ನ ಹತ್ತಿರದ ಸಂಬಂಧಿಗಳೆಲ್ಲರೂ ಬ್ರಿಟನ್ ಅಥವಾ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಭಾರತದಲ್ಲಿ ಯಾರೂ ಇಲ್ಲ. ನನ್ನ ಸಹೋದರ ಸಂಬಂಧಿಗಳೂ ಬ್ರಿಟನ್ ನಾಗರಿಕರು. ಹಾಗಾಗಿ ಭಾರತದಲ್ಲಿ ಮಿಸ್ ಮಾಡಿಕೊಳ್ಳುವಂತಹದ್ದು, ಅಲ್ಲಿಗೆ ಸೆಳೆಯುವಂತಹದ್ದು ಏನೂ ಇಲ್ಲ’ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉದ್ಧಟತನದಿಂದ ಉತ್ತರಿಸಿದ್ದಾರೆ.