ಅಮೇರಿಕಾ: 3-4 ವಾರಗಳಲ್ಲಿ ಕೊರೊನಾ ಸೋಂಕಿಗೆ ಲಸಿಕೆ ಸಿಗಲಿದೆ ಎಂದು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಲಸಿಕೆ ಬಗ್ಗೆ ಅಮೇರಿಕ ಅಧ್ಯಕ್ಷ ಟ್ರಂಪ್ ಮಾತನಾಡಿದ್ದು, 4 ವಾರಗಳಲ್ಲಿ ಕೊವಿಡ್-19ಕ್ಕೆ ಲಸಿಕೆ ಸಿದ್ಧವಾಗಲಿದೆ. ಹಿಂದಿನ ಆಡಳಿತವಿದ್ದಿದ್ರೆ ಲಸಿಕೆ ಅಭಿವೃದ್ಧಿಗೆ ವರ್ಷಗಳಾಗ್ತಿತ್ತು. ನಾವೀಗ ವಾರಗಳಲ್ಲಿಯೇ ಲಸಿಕೆ ಅಭಿವೃದ್ಧಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಹಾಗೇ ಅಮೇರಿಕನ್ನರಿಗೆ ಕೊವಿಡ್ -19 ಲಸಿಕೆಯನ್ನು ಉಚಿತವಾಗಿ ನೀಡಲು ಟ್ರಂಪ್ ಸರ್ಕಾರ ನಿರ್ಧಾರ ಮಾಡಿದೆ ಎಂಬುದಾಗಿ ತಿಳಿದುಬಂದಿದೆ.