Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪತಿಯೇ ತನ್ನ ಸ್ವಂತ ಅಜ್ಜನೆಂದು ಗೊತ್ತಾದಾಗ..ಮಹಿಳೆ ಏನು ಮಾಡಿದ್ಳು ಗೊತ್ತಾ..?

ಪತಿಯೇ ತನ್ನ ಸ್ವಂತ ಅಜ್ಜನೆಂದು ಗೊತ್ತಾದಾಗ..ಮಹಿಳೆ ಏನು ಮಾಡಿದ್ಳು ಗೊತ್ತಾ..?
ವಾಷಿಂಗ್ಟನ್ , ಸೋಮವಾರ, 3 ಅಕ್ಟೋಬರ್ 2016 (16:37 IST)
24 ವರ್ಷದ ಮಹಿಳೆಗೆ ತಾನು ಕೆಲವೇ ತಿಂಗಳುಗಳ ಹಿಂದೆ ವಿವಾಹವಾದ 68 ವರ್ಷ ವಯಸ್ಸಿನ ಪತಿಯೇ ತನ್ನ ತಾತ ಎಂದು ತಿಳಿದ ನಂತರ ಆಘಾತಗೊಂಡಿದ್ದಾಳೆ.
 
ಮೂರು ತಿಂಗಳ ಹಿಂದೆ ವಿವಾಹವಾದ ದಂಪತಿಗಳು ಫ್ಲೋರಿಡಾದ ಮಿಯಾಮಿ ಬೀಚ್‌ನಲ್ಲಿ ವಾಸಿಸುತ್ತಿದ್ದಾರೆ. ಒಂದು ದಿನ ಪತಿ ಮನೆಯಲ್ಲಿದ್ದ ಅಲ್ಬಂಗಳನ್ನು ಪತ್ನಿಗೆ ತೋರಿಸುತ್ತಿರುವಾಗ ಸತ್ಯ ಸಂಗತಿ ಬಹಿರಂಗವಾಗಿದೆ.  
 
ಅಲ್ಬಂನಲ್ಲಿ ಪತಿಯ ಮೊದಲ ಪತ್ನಿಯ ಮಕ್ಕಳ ಫೋಟೋಗಳಿದ್ದವು. ಅದರಲ್ಲಿರುವ ಒಬ್ಬ ಪುತ್ರನ ಫೋಟೋ ತನ್ನ ತಂದೆಯದಾಗಿದೆ ಎಂದು ಪತ್ನಿ ಗುರುತು ಹಿಡಿದಿದ್ದಾಳೆ. 
 
ಪತಿಯ ಪ್ರಕಾರ, ಕೆಲ ತಿಂಗಳುಗಳ ನಂತರ ಮೊದಲ ಪತ್ನಿ ವಿಚ್ಚೇದನ ನೀಡಿ ತನ್ನ ಮಕ್ಕಳೊಂದಿಗೆ ಬೇರೆ ಪ್ರದೇಶಕ್ಕೆ ತೆರಳಿದ್ದಾಳೆ. ತದನಂತರ ಅವಳ ಹುಡುಕಾಟ ನಡೆಸಿದರು ಯಾವುದೇ ಪ್ರಯೋಜನವಾಗಿರಲಿಲ್ಲವಂತೆ.
 
ನಂತರ ಎರಡನೇ ಪತ್ನಿ ಕೂಡಾ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾದಾಗ ವಿಚ್ಚೇದನ ನೀಡಿ ತನ್ನ ಮಕ್ಕಳೊಂದಿಗೆ ಹೊರಟುಹೋಗಿದ್ದಾಳೆ. ಆದರೆ, ನಂತರ ಲಾಟರಿಯಲ್ಲಿ ಹಲವಾರು ಮಿಲಿಯನ್ ಡಾಲರ್ ಗೆದ್ದ ಪಕತಿ ಮಹಾಶಯ ಮೂರನೇ ವಿವಾಹಕ್ಕೆ ಸಜ್ಜಾಗಿದ್ದಾನೆ. 
 
ಕಳೆದ 2015ರಲ್ಲಿ 24 ವರ್ಷದ ಯುವತಿಯೊಂದಿಗೆ(ಮೊಮ್ಮಗಳು) ವಿವಾಹವಾಗಿದ್ದಾನೆ. ಸತ್ಯ ಸಂಗತಿ ಬಹಿರಂಗವಾದ ನಂತರ ಪತ್ನಿ ಕೂಡಾ ತನ್ನ ಹಿಂದಿನ ಜೀವನದ ಕಥೆಯನ್ನು ತಿಳಿಸಿದ್ದಾಳೆ. ತಾನು ಬೇರೆ ಯುವಕನೊಂದಿಗೆ ಪ್ರೀತಿಸಿ ಗರ್ಭಿಣಿಯಾಗಿದ್ದರಿಂದ ತನ್ನ ತಂದೆ ಮನೆಯಿಂದ ಹೊರಹಾಕಿದ್ದ ಎನ್ನುವ ರೋಚಕ ಸಂಗತಿ ಬಹಿರಂಗಗೊಳಿಸಿದ್ದಾಳೆ.
 
ನಮ್ಮ ಬಾಂಧವ್ಯ ಜನ್ಮ ಜನ್ಮಾಂತರದಾಗಿದ್ದರಿಂದ ನನ್ನ ಪತಿಯೊಂದಿಗೆ(ಅಜ್ಜ) ಜೀವನ ನಡೆಸುವುದಾಗಿ ಮಹಿಳೆ(ಮೊಮ್ಮಗಳು) ತಿಳಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಯನ್ನು ಆಕಾಶಕ್ಕೆ ಹೋಲಿಸಿ ಗುಣಗಾನ ಮಾಡಿದ ಕೇಜ್ರಿವಾಲ್