Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಐಸಿಸ್ ಉಗ್ರರ ನೆಲೆಗಳ ಮೇಲೆ ನಾನ್-ನ್ಯೂಕ್ಲಿಯರ್ ಬಾಂಬ್ ದಾಳಿ

ಐಸಿಸ್ ಉಗ್ರರ ನೆಲೆಗಳ ಮೇಲೆ ನಾನ್-ನ್ಯೂಕ್ಲಿಯರ್ ಬಾಂಬ್ ದಾಳಿ
ನಂಗರ್‌ಹಾರ್(ಅಫ್ಘಾನಿಸ್ತಾನ್) , ಶುಕ್ರವಾರ, 14 ಏಪ್ರಿಲ್ 2017 (11:49 IST)
ಐಸಿಸ್ ಉಗ್ರರ ನೆಲೆಗಳ ಮೇಲೆ ಅಮೆರಿಕದ ವಾಯುಸೇನೆ ನಾನ್-ನ್ಯೂಕ್ಲಿಯರ್ ಬಾಂಬ್ ದಾಳಿ ನಡೆಸಿದ್ದು, ಉಗ್ರರ ಮಾರಣಹೋಮ ನಡೆದಿದೆ ಎಂದು ಮೂಲಗಳು ತಿಳಿಸಿವೆ.
 
ಐಸಿಸ್ ಉಗ್ರರು ದಾಳಿ ನಡೆಸಿ ಪರಾರಿಯಾಗಲು ಸುರಂಗ ಮಾರ್ಗಗಳನ್ನು ಬಳಸುತ್ತಿದ್ದಾರೆ ಎನ್ನುವ ಮಾಹಿತಿ ಪಡೆದ ಅಮೆರಿಕ ಸೇನೆ, ಮದರ್ ಆಫ್ ಆಲ್ ಬಾಂಬ್ಸ್ ಎನ್ನುವ ಜಿಬಿಯು-45 ಬಾಂಬ್ ದಾಳಿ ನಡೆಸಿದೆ.
 
ಐಸಿಸ್ ಉಗ್ರರು ಮತ್ತು ತಾಲಿಬಾನ್ ಉಗ್ರರು ಜಂಟಿಯಾಗಿ ಅಫ್ಘಾನಿಸ್ತಾನದಲ್ಲಿ ಅಮೆರಿಕ ಸೇನೆ ವಿರುದ್ಧ ನಡೆಸುತ್ತಿದ್ದ ದಾಳಿಗಳಿಂದ ಆಕ್ರೋಶಗೊಂಡ ಅಮೆರಿಕ ಇದೀಗ ಭಾರಿ ವಿನಾಶಕಾರಿ ಬಾಂಬ್ ದಾಳಿ ನಡೆಸಿದೆ.
 
ಐಸಿಸ್ ಉಗ್ರರು ಶರಣಾಗದಿದ್ದಲ್ಲಿ ಸಿರಿಯಾ ಸೇರಿದಂತೆ ಭೀಕರ ದಾಳಿ ಮುಂದುವರಿಯಲಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಏನೇ ಆಗಲಿ ವಂದೇ ಮಾತರಂ ಹಾಡಲ್ಲ ಎಂದ ಉತ್ತರಾಖಂಡ್ ಕಾಂಗ್ರೆಸ್!