ಅವಳಿಗಳು ಜತೆಜತೆಯಾಗಿಯೇ ಹುಟ್ಟಿರುತ್ತವೆ. ರೂಪ,ಗುಣ, ಆರೋಗ್ಯ ಸೇರಿದಂತೆ ಬಹುತೇಕ ಎಲ್ಲದರಲ್ಲಿಯೂ ಒಬ್ಬರನೊಬ್ಬರು ಹೋಲುತ್ತವೆ. ಆದರೆ ಮಿಯಾಮಿಯಲ್ಲಿ ಜನಿಸಿದ ಅವಳಿ ಮಕ್ಕಳ ವಿಷಯದಲ್ಲಿ ಬಹುದೊಂಡ್ಡ ಅಂತರವೊಂದಿದೆ. ಅವರಿಬ್ಬರು ಹುಟ್ಟುವಾಗ ಕೆಲವು ಕ್ಷಣಗಳ ಅಂತರ ಹೊಂದಿದ್ದರೂ, ಹುಟ್ಟಿದ ದಿನಕ್ಕೆ ವರ್ಷಗಳಂತರವಿದೆ. ಅದು ಹೇಗೆ ಸಾಧ್ಯ?
ನಿಕ್ ಕ್ರಿಡಲ್ ಎಂಬ ತಂದೆಯ ಮುದ್ದು ಗಂಡುಮಕ್ಕಳಿವು. ಒಂದು ಡಿಸೆಂಬರ್ 31, 2016ರ ಅಂತ್ಯಕ್ಕೆ ರಾತ್ರಿ 11.59ಕ್ಕೆ ಹುಟ್ಟಿದರೆ, ಮತ್ತೊಂದು 12 ಗಂಟೆ 1 ನಿಮಿಷಕ್ಕೆ ಅಂದರೆ ಜನವರಿ 1, 2017 ಕ್ಕೆ ಹುಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸುತ್ತ ನಿಕ್ ವೈದ್ಯರು ಪ್ರಸವದ ದಿನಾಂಕವನ್ನು ಫೆಬ್ರವರಿ 4ಕ್ಕೆ ಕೊಟ್ಟಿದ್ದರು. ಆದರೆ ಮೊದಲೇ ಹೆರಿಗೆಯಾಗಿದೆ. ನನ್ನ ಮಕ್ಕಳು ಎಲ್ಲವನ್ನು ಹಂಚಿಕೊಂಡು ಬಾಳಲಿದ್ದಾರೆ, ಆದರೆ ಹುಟ್ಟಿದ ದಿನ ಮತ್ತು ವರ್ಷವನ್ನಲ್ಲ. ಇದು ನಿಜವಾಗಿಯೂ ತಮಾಷೆಯ ವಿಷಯ ಎಂದು ನಗುತ್ತಾರೆ ನಿಕ್.
ಮಕ್ಕಳಿಗೆ ಜೇಮ್ಸ್ ಮತ್ತು ಮ್ಯಾಥ್ಯೂ ಎಂದು ಹೆಸರಿಡಲಾಗಿದ್ದು ನಿಕ್ ದಂಪತಿಗೆ 13 ಮತ್ತು 11 ವರ್ಷದ ಇಬ್ಬರು ಹೆಣ್ಣುಮಕ್ಕಳು ಕೂಡ ಇದ್ದಾರೆ.