Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಾಲಿಗೆ ಸಕ್ಕರೆ ಪ್ರಮಾಣ ಕಡಿಮೆ ಮಾಡಬೇಕೆಂದರೆ ವೆನಿಲ್ಲಾ ಸೇರಿಸಬೇಕಂತೆ!

ಹಾಲಿಗೆ ಸಕ್ಕರೆ ಪ್ರಮಾಣ ಕಡಿಮೆ ಮಾಡಬೇಕೆಂದರೆ ವೆನಿಲ್ಲಾ ಸೇರಿಸಬೇಕಂತೆ!
ವಾಷಿಂಗ್ಟನ್ , ಭಾನುವಾರ, 23 ಜೂನ್ 2019 (06:26 IST)
ವಾಷಿಂಗ್ಟನ್ : ಹಾಲಿಗೆ ಸೇರಿಸುವ ಸಕ್ಕರೆ ಪ್ರಮಾಣ ಕಡಿಮೆ ಮಾಡಬೇಕೆಂದುಕೊಳ‍್ಳುವವರು ಹಾಲಿಗೆ ವೆನಿಲ್ಲಾ ಸೇರಿಸಿ. ಇದರಿಂದ ಬರುವ ಪರಿಮಳವು, ಹಾಲು ಸಿಹಿಯಾಗಿದೆ ಎಂದು ಮೆದುಳು ಯೋಚಿಸುವಂತೆ ಮಾಡುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.




ಹೌದು. ಯುಎಸ್ ನ ಪೆನ್ಸಿಲ್ವೇನಿಯಾ ಸ್ಟೇಟ್  ಯೂನಿವರ್ಸಿಟಿ  ಈ ಬಗ್ಗೆ ಸಂಶೋಧನೆ ನಡೆಸಿದ್ದು, ಇಲ್ಲಿ ಕೆಲವರನ್ನು ಬ್ಲೈಂಡ್ ಟೇಸ್ಟ್ ಎಂಬ ಪರೀಕ್ಷೆಗೆ ಒಳಡಿಸಿದ್ದು, ಅದರಲ್ಲಿ ಭಾಗವಹಿಸಿದವರಿಗೆ ಹಾಲಿಗೆ ವೆನಿಲ್ಲಾ ಸೇರಿಸಿ ನೀಡಲಾಗಿತ್ತು. ಆ ವೇಳೆ ಈ ವಿಚಾರ ತಿಳಿದುಬಂದಿದೆ.


ವೆನಿಲ್ಲಾ ವನ್ನು ಹಾಲಿಗೆ ಸೇರಿಸಿದರೆ ಅದರ ಸುವಾಸನೆಯಿಂದ ಹಾಲಿಗೆ ಸೇರಿಸಲಾಗುವ ಸಕ್ಕರೆ ಅಂಶವನ್ನು ಶೇಕಡಾ 20ರಿಂದ 50ರಷ್ಟು ಕಡಿಮೆಗೊಳಿಸಬಹುದು ಎಂದು ಈ ಬಗ್ಗೆ ಸಂಶೋಧನೆ ನಡೆಸಿದ್ದ ಸಂಶೋಧಕಿಯೊಬ್ಬರು ಹೇಳಿದ್ದಾರೆ. ಕೊಬ್ಬು ಮತ್ತು ಉಪ್ಪನ್ನು ಕಡಿಮೆ ಮಾಡುವುದರ ಜೊತೆಗೆ ಸಕ್ಕರೆ ಅಂಶವನ್ನು ಕಡಿಮೆ ಮಾಡುವ ಈ ಪಾನೀಯ “ಆಹಾರ ವಿಜ್ಞಾನದ ಪವಿತ್ರ ಪಾನೀಯ” ಎಂದು ಅಲ್ಲಿನ ಸಂಶೋಧಕರು ಹೇಳಿದ್ದಾರೆ.    


ಅಲ್ಲದೇ ಇದರಿಂದ ಸ್ವೀಟ್ ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ ಸಕ್ಕರೆ ಅಂಶವನ್ನು ಕಡಿಮೆ ಮಾಡಿ ಅದರ  ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆ ಸಿಹಿ ಇಷ್ಟಪಡುವ ಗ್ರಾಹಕರ ಬೇಡಿಕೆಗಳನ್ನು ಪೂರೈಸಲು ಸಹಕಾರಿಯಾಗಿದೆ ಎನ್ನಲಾಗಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಕೈಕಾಲು ಕಳೆದುಕೊಂಡ ಇಂಜಿನಿಯರಿಂಗ್ ಪದವೀಧರನಿಗೆ ಸಿಎಂ ನೀಡಿದ ಪರಿಹಾರ ಎಷ್ಟು?