ಡಾಕ್ಟರ್ ಡಾಟ್ ಅಲಿಯಾಸ್ ಡೊರೋಥಿ ಸ್ಟೈನ್ ನ್ಯೂಜೆರ್ಸಿಯ ವೈದ್ಯರಾಗಿದ್ದು ಸಾಮಾನ್ಯ ವೈದ್ಯರಂತೂ ಅಲ್ಲ. ಅವರ ಚಿಕಿತ್ಸೆಯ ವಿಶೇಷತೆ ಏನೆಂದರೆ ತಮ್ಮ ಹಲ್ಲುಗಳ ಮೂಲಕ ಅವರು ಮಸಾಜ್ ಮಾಡುತ್ತಾರೆ. ತನ್ನ ಸೆಲಿಬ್ರಿಟಿ ಗಿರಾಕಿಗಳನ್ನು ಹಲ್ಲಿನಿಂದ ಕಚ್ಚಿ ಮಸಾಜ್ ಮಾಡುವ ಮೂಲಕ ರಿಲ್ಯಾಕ್ಸಿಂಗ್ ಭಾವನೆಯನ್ನು ಉಂಟುಮಾಡುತ್ತಾರೆ.
ತನ್ನ ತಾಯಿಗೆ ಮಸಾಜ್ ಮಾಡುತ್ತಿದ್ದ ಡಾ. ಡಾಟ್ ಈ ಕಚ್ಚುವ ತಂತ್ರವನ್ನು 90ರ ದಶಕದಲ್ಲಿ ಕಲಿತರು. ತನ್ನ ವಿಚಿತ್ರ ಶೈಲಿಯ ಮಸಾಜ್ನಿಂದ ಪ್ರಖ್ಯಾತರಾದ ಅವರು ತನ್ನ ನೆಚ್ಚಿನ ರಾಕ್ ಬ್ಯಾಂಡ್ಗಳಿಗೆ ಉಚಿತ ಮಸಾಜ್ ಮಾಡಲಾರಂಭಿಸಿದರು. ಪ್ರಖ್ಯಾತ ಸಂಗೀತಗಾರ ಫ್ರಾಂಕಾ ಜಾಪ್ಪಾ ಡೋರೋತಿಗೆ ಡಾಕ್ಟರ್ ಡಾಟ್ ಎಂದು ಹೆಸರಿಟ್ಟರು.
ಒಂದು ಮಸಾಜ್ ಸೆಷನ್ಗೆ ಅವರು 150 ಡಾಲರ್ ಶುಲ್ಕ ವಿಧಿಸುತ್ತಾರೆ. ಬೆನ್ನು ಮತ್ತು ಪ್ರಷ್ಠಗಳನ್ನು ಕಚ್ಚುವ ಮೂಲಕ ಅವರು ಸಾಂಪ್ರದಾಯಿಕ ತೈಲ ಮಸಾಜ್ ಮಾಡುತ್ತಾರೆ.