ಇಂತಹ ಹೇಯ ಘಟನೆಯ ಬಗ್ಗೆ ನೀವೆಂದೂ ಕೇಳಿರಲಾರಿರಿ. ಕೆಟ್ಟ ಮಕ್ಕಳು ಹುಟ್ಟಬಹುದು, ಆದರೆ ಕೆಟ್ಟ ತಾಯಿ ಇರಲಾರಳು ಎಂಬ ಗಾದೆಮಾತನ್ನು ಸುಳ್ಳಾಗಿಸಿದ ಕರಾಳ ಘಟನೆ ಇದು. ಹೃದಯಹೀನ ಪಾಪಿ ತಾಯಿಯೊಬ್ಬಳು ತನ್ನದೇ ಮಗಳ ಸಾಮೂಹಿಕ ಅತ್ಯಾಚಾರ, ಕೊಲೆಯನ್ನು ಕಣ್ಣಾರೆ ಕಂಡು, ಮರುಕ್ಷಣವೇ ಕೊಲೆಗಾರನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡ ಹಿಂದೆಂದೂ ಕೇಳರಿಯದ ದಾರುಣ ಘಟನೆ ನ್ಯೂ ಮೆಕ್ಸಿಕೋದಲ್ಲಿ ನಡೆದಿದೆ.
35 ವರ್ಷದ ಮಹಿಳೆ ಮಿಚೆಲ್ ಮಾರ್ಟಿನ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು 10 ವರ್ಷದ ಮಗಳು ವಿಕ್ಟೋರಿಯಾಳನ್ನು ತನ್ನ ಪ್ರಿಯತಮ ಫ್ಯಾಬಿಯನ್ ಗೊಂಜಾಲೆಸ್ (31) ಮತ್ತು ಆತನ ಕಸಿನ್ ಸಾಮೂಹಿಕ ಅತ್ಯಾಚಾರಗೈದು ಕೊಂದಿದ್ದಾರೆ. ಅದೆಲ್ಲವನ್ನು ತಾನು ಕಣ್ಣಾರೆ ಕಂಡೆ ಎಂದು ನಿರ್ಭಾವುಕಳಾಗಿ ನುಡಿದಿದ್ದಾಳೆ.
ಆಗಸ್ಟ್ 23 ರಂದು ಈ ಘಟನೆ ನಡೆದಿದ್ದು, ಬಾಲಕಿಗೆ ಮಾದಕ ದ್ರವ್ಯ ಕುಡಿಸಿ, ಸಾಮೂಹಿಕ ಅತ್ಯಾಚಾರಗೈದು, ಉಸಿರುಗಟ್ಟಿಸಿ, ಚಾಕುವಿನಿಂದ ಇರಿದು, ತುಂಡು ತುಂಡಾಗಿ ಕತ್ತರಿಸಿ ಸಾಯಿಸಲಾಗಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ತಿಳಿಸಿದೆ.
ಈ ರಾಕ್ಷಸೀ ತಾಯಿ ಅನೇಕ ಬಾರಿ ಮಗಳ ಅತ್ಯಾಚಾರವಾಗುವುದನ್ನು ನೋಡಿದ್ದಾಳೆ. ಮತ್ತಿಬ್ಬರು ಪುರುಷರನ್ನು ಕರೆದು ಆಕೆಯನ್ನು ಬಳಸಿಕೊಳ್ಳುವಂತೆ ಮಾಡಿ , ಅದನ್ನು ನೋಡಿ ಖುಷಿ ಪಟ್ಟಿದ್ದಾಳೆ. ತನ್ನ ಪ್ರಿಯಕರ ಆಗಾಗ ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಎಂದು ಪಾಪಿ ತಾಯಿ ಘೋರ ಸತ್ಯವನ್ನು ಹೊರಹಾಕಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ