ಟರ್ಕಿ : ಮಹಿಳೆಯೊಬ್ಬಳು ತಾನು ಹೆತ್ತ ಮಗುವಿನ ಕಿವಿ ಮತ್ತು ಹೊಕ್ಕಳಿಗೆ ಬಲವಂತವಾಗಿ ಬ್ಲೀಚ್ ಚುಚ್ಚುಮದ್ದನ್ನು ಹಾಕಿ ಹಿಂಸಿಸುತ್ತಿದ್ದ ಘಟನೆ ಟರ್ಕಿಯ ಇಸ್ತಾನ್ಬುಲ್ ನಲ್ಲಿ ನಡೆದಿದೆ.
ಎಲಿಫ್ ಇಂತಹ ಕೃತ್ಯ ಎಸಗಿದ ತಾಯಿಯಾಗಿದ್ದು, ಈಕೆ ಪತಿ ಹಾಗೂ ಮೂರು ಮಕ್ಕಳ ಜೊತೆ ಈಕೆ ವಾಸವಾಗಿದ್ದಾಳೆ. ತನ್ನ ಕೊನೆ ಮಗುವಿಗೆ ಒಂದು ತಿಂಗಳಿರುವಾಗ್ಲೇ ಎಲಿಫ್ ಆಸ್ಪತ್ರೆಗೆ ಕರೆದೊಯ್ದು ಕಿವಿ ಮತ್ತು ಹೊಕ್ಕಳಿಗೆ ಬ್ಲೀಚ್ ಚುಚ್ಚುಮದ್ದನ್ನು ಹಾಕ್ತಿದ್ದಳಂತೆ. ಇದರಿಂದ ಮಗುವಿನ ದೇಹದ ತುಂಬ ಗಾಯಗಳಾಗಿ, ಮೆದುಳಿನಲ್ಲಿ ಸಮಸ್ಯೆ ಕಂಡು ಬಂದ ಹಿನ್ನಲೆಯಲ್ಲಿ ಮಗುವಿನ ಆರೋಗ್ಯ ಸ್ಥಿತಿ ಗಂಭೀರಮಟ್ಟಕ್ಕೆ ತಲುಪಿತ್ತು. ಇದರಿಂದ ಮಗುವನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.
ಪೊಲೀಸರು ಮಗಳ ಭೇಟಿಗೆ ಅವಕಾಶ ನೀಡದೆ ಇದ್ದಾಗ ಒತ್ತಡಕ್ಕೊಳಗಾಗದ ಎಲಿಫ್ ತನ್ನ ನೀಚ ಕೃತ್ಯದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.