ವಾಷಿಂಗ್ಟನ್: ‘2019ರ ಭಾರತದ ಚುನಾವಣೆಗೆ ಯಾವುದೇ ತೊಂದರೆ ಇಲ್ಲ ಎಂದು ಖಚಿತಪಡಿಸಿಕೊಳ್ಳಲು ನಾವು ಎಲ್ಲವನ್ನೂ ಮಾಡುತ್ತೇವೆ’, ಎಂದು ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಝುಕರ್ ಬರ್ಗ್ ಹೇಳಿದ್ದಾರೆ.
ಫೇಸ್ಬುಕ್ ಬಳಕೆದಾರರ ಮಾಹಿತಿಗಳು ಕೇಂಬ್ರಿಡ್ಜ್ ಅನಾಲಿಟಿಕಾ ಸಂಸ್ಥೆಗೆ ಸೋರಿಕೆಯಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಅಮೆರಿಕಾದ ಸೆನೆಟ್ ಸಮಿತಿಗೆ ಮಾರ್ಕ್ ಝುಕರ್ ಬರ್ಗ್ ಹಾಜರಾಗಿದ್ದರು.
ಸೆನೆಟ್ ಸದಸ್ಯರಿಂದ ಕೇಳಲ್ಪಟ್ಟ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಿದ ಝುಕರ್ ಬರ್ಗ್ ‘2018 ಇಡೀ ಪ್ರಪಂಚಕ್ಕೆ ಒಂದು ಪ್ರಮುಖ ವರ್ಷವಾಗಿದೆ. ಭಾರತ, ಪಾಕಿಸ್ತಾನದಂತಹ ಹಲವು ದೇಶಗಳು ಚುನಾವಣೆಗಳನ್ನು ಹೊಂದಿವೆ. ಈ ಚುನಾವಣೆಗಳು ಸುರಕ್ಷಿತವೆಂದು ಖಚಿತಪಡಿಸಿಕೊಳ್ಳಲು ನಾವು ಎಲ್ಲವನ್ನೂ ಮಾಡುತ್ತೇವೆ’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ