ಜಾನ್(106) ಹಾಗೂ ಷಾರ್ಲೆಟ್(105) ಎಂಬುವವರು 1934ರಂದು ಟೆಕ್ಸಾಸಿನ ವಿಶ್ವವಿದ್ಯಾಲಯದಲ್ಲಿ ಭೇಟಿಯಾಗಿ ಸ್ನೇಹಿತರಾಗಿದ್ದು, ಬಳಿಕ ಸ್ನೇಹ ಪ್ರೀತಿಗೆ ತಿರುಗಿ, ಎರಡನೇ ಮಹಾಯುದ್ಧದ ನಂತರ ಡಿಸೆಂಬರ್ 22, 1939ರಂದು ವಿವಾಹವಾಗಿದ್ದರು.
ಇದೀಗ ಇವರು 80ನೇ ವರ್ಷದ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಡಿ.11ರಂದು ಈ ಸಂಭ್ರಮವನ್ನು ಆಚರಿಸಿಕೊಂಡಿದ್ದಾರೆ. ಆ ಮೂಲಕ ಇವರು ಜಗತ್ತಿನ ಅತೀ ಹಿರಿಯ ದಂಪತಿಗಳು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.