ವಾಷಿಂಗ್ಟನ್ : ಟೆಸ್ಲಾ ಸಿಇಒ ಎಲೋನ್ ಮಸ್ಕ್ ಬಗ್ಗೆ ಇತ್ತೀಚೆಗೆ ಹಲವು ಚರ್ಚೆಗಳು ನಡೆಯುತ್ತಿದೆ.
ಈ ಹಿನ್ನೆಲೆ ಅಸಮಾಧಾನಗೊಂಡ ಮಸ್ಕ್ ಟ್ವೀಟ್ ಮಾಡುವ ಮೂಲಕ ತಮ್ಮ ಮುಖ್ಯ ಉದ್ದೇಶವನ್ನು ಹೇಳಿಕೊಂಡಿದ್ದಾರೆ.
ಟ್ವೀಟ್ ಮಾಡಿದ ಮಸ್ಕ್, ಎಲ್ಲರಿಗೂ ನನ್ನ ಮೇಲೆಯೇ ಗಮನವಿದೆ. ಈ ರೀತಿಯ ಗಮನ ನನ್ನನ್ನು ಕುಗ್ಗಿಸುವಂತೆ ಮಾಡುತ್ತೆ. ದುರದೃಷ್ಟವಶಾತ್, ಇತ್ತೀಚೆಗೆ ನನ್ನ ಬಗ್ಗೆ ಕ್ಷುಲ್ಲಕ ಸುದ್ದಿಗಳು ಕೇಳಿಬರುತ್ತಿದೆ.
ಇದು ನನ್ನಲ್ಲಿ ಹಲವು ಗೊಂದಲಗಳನ್ನು ಸೃಷ್ಟಿಸುತ್ತವೆ. ಆದರೆ ನಾನು ನಾಗರಿಕರಿಗೆ ಉಪಯುಕ್ತವಾದ ಕೆಲಸಗಳ ಕಡೆ ಗಮನಹರಿಸಲು ನನ್ನ ಕೈಲಾದಷ್ಟು ಪ್ರಯತ್ನಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.