ಲಂಡನ್ : ಜರ್ಮನಿಯ ಖ್ಯಾತ ಕಂಪೋಸರ್ ಮತ್ತು ಪಿಯಾನಿಸ್ಟ್ ಲುಡ್‌ವಿಂಗ್ ವಾನ್ ಬೀಥೋವನ್ ಅವರ ಕೂದಲಿನ ತುಂಡುಗಳಿರುವ ಪೆಟ್ಟಿಗೆ ಎಷ್ಟು ಬೆಲೆಗೆ ಮಾರಾಟವಾಗಿದೆ ಎಂಬುದನ್ನು ಕೇಳಿದ್ರೆ ಶಾಕ್ ಆಗ್ತೀರಾ.
ಹೌದು. 1826ರಲ್ಲಿ ಬೀಥೋವನ್ ತನ್ನ ಹಿಂಬಾಲಕ ಸಂಗೀತಗಾರನಿಗೆ ಅತನ ಪತ್ನಿಯ ಜನ್ಮದಿನದ ಉಡುಗೊರೆಯಾಗಿ ತುಂಡರಿಸಿ ಕೊಟ್ಟಿದ್ದ ಕೂದಲುಗಳನ್ನು ಇಟ್ಟ ಪೆಟ್ಟಿಗೆ ಬ್ರಿಟಿಷ್ ಆಕ್ಷನ್ ಹೌಸ್ ಸೌಥಿಬೆನಲ್ಲಿತ್ತು. ಅದು ಈಗ ಮಾರಾಟವಾಗಿದ್ದು, ಬರೋಬರಿ 35,000 ಯೂರೋ ಡಾಲರ್(ಬರೋಬ್ಬರಿ 31 ಲಕ್ಷ ರೂ.)ಗೆ ಮಾರಾಟವಾಗುವುದರ ಮೂಲಕ ಅಚ್ಚರಿಯನ್ನುಂಟು ಮಾಡಿದೆ.
ಆಸ್ಟ್ರೇಲಿಯಾದ ಪಿಯಾನಿಸ್ಟ್ ಅಂಟೊನ್ ಹಾಮ್ ತನ್ನ ಪತ್ನಿಗಾಗಿ ಬೀಥೋವನ್ಸ್ ಅವರ ಕೂದಲನ್ನು ಕೊಡುವಂತೆ ಮನವಿ ಮಾಡಿಕೊಂಡಿದ್ದ. ಆದರೆ ಕುರಿಯ ಕೂದಲನ್ನು ಕಳುಹಿಸಿ ಕೊಟ್ಟ ಬೀಥೋವನ್ಸ್ ಪಶ್ಚಾತ್ತಾಪಗೊಂಡು ತಕ್ಷಣ ತನ್ನ ಹಿಂಬದಿಯ ಒಂದಷ್ಟು ಕೂದಲನ್ನು ಕತ್ತರಿಸಿ ಕೊಟ್ಟಿದ್ದರು. ಅದನ್ನು ಹಾಮ್ ಒಂದು ಪೆಟ್ಟಿಗೆಯಲ್ಲಿ ಸಂಗ್ರಹಿಸಿ ಇಟ್ಟಿದ್ದ.