ಉತ್ತರ ಅರ್ಜೈಂಟೀನಾ : ಪ್ರಪಂಚದಲ್ಲಿ ಅನೇಕ ಚಿತ್ರವಿಚಿತ್ರ ಘಟನೆಗಳು ಆಗಾಗ ನಡೆಯುತ್ತಿದ್ದು, ಇದೀಗ ಮಾನವ ಮುಖವನ್ನು ಹೋಲುವ ವಿಚಿತ್ರ ಕರುವೊಂದು ಉತ್ತರ ಅರ್ಜೈಂಟೀನಾದಲ್ಲಿ ಜನಿಸಿದೆ ಎನ್ನಲಾಗಿದೆ.
ಅರ್ಜೈಂಟೀನಾದಲ್ಲಿ ವಿಲ್ಲಾ ಅನಾ ಎಂಬ ಗ್ರಾಮದಲ್ಲಿನ ರೈತರೊಬ್ಬರ ಮನೆಯಲ್ಲಿ ಮಾನವ ಮುಖ ಮತ್ತು ಮೂಗನ್ನು ಹೋಲುವ ಕರುವೊಂದು ಜನಿಸಿದೆ. ಅದರ ವಿಡಿಯೋವನ್ನು ರೈತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆದರೆ ಈ ಕರು ತನ್ನದೇ ತಲೆಯ ಭಾರ ಹೊತ್ತುಕೊಳ್ಳಲಾಗದೆ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ತಲೆಬುರುಡೆ ವಿರೂಪಗೊಂಡು ಈ ಕರು ಜನಿಸಿದೆ. ಇದೊಂದು ಅಪರೂಪದ ತಳಿಯ ರೂಪಾಂತರ ಎಂದು ಜೆನೆಟಿಕ್ಸ್ ತಜ್ಞ ನಿಕೋಲಸ್ ಮಾಗ್ನೊವಾ ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿಯೊಂದು ತಿಳಿಸಿದೆ.