ದೇವಾನ್:ಶಾಲೆಯ ಸಮವಸ್ತ್ರ ನೀತಿ ವಿರುದ್ಧ ರೊಚ್ಚಿಗೆದ್ದ ಶಾಲಾಬಾಲಕರು ಸ್ಕರ್ಟ್ ಧರಿಸಿ ವಿಶೇಷ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಇಸ್ಕಾ ಅಕಾಡೆಮಿ ಶಾಲೆಯಲ್ಲಿ ನಡೆದಿದೆ.
ಇಂಗ್ಲೆಂಡ್ ನ ಇಸ್ಕಾ ಅಕಾಡೆಮಿಯ ಬಾಲಕರು ಇಂತದ್ದೊಂದು ವಿಶೇಷ ಪ್ರತಿಭಟನೆ ನಡೆಸಿದ್ರು. ನಗರದಲ್ಲಿ ತಾಪಮಾನ 30 ಡಿಗ್ರಿ ಸೆಲ್ಶಿಯಸ್ ಗಿಂತ ಹೆಚ್ಚಾದಾಗ ಶಿಕ್ಷಕರ ಬಳಿ ತಮಗೆ ಪ್ಯಾಂಟ್ ಬದಲು ಶಾರ್ಟ್ಸ್ ತೊದಲು ಅವಕಾಶ ನೀಡುವಂತೆ ಕೇಳಿದ್ದಾರೆ. ಅದಕ್ಕೆ ಶಿಕ್ಷಕರು ಶಾರ್ಟ್ಸ್ ಸಮವಸ್ತ್ರ ನೀತಿಯಲ್ಲಿಲ್ಲ ಎಂದು ನಿರಾಕರಿಸಿದ್ದಾರೆ. ಬಾಲಕಿಯರಿಗೆ ಮಾತ್ರ ಶಾರ್ಟ್ಸ್ ತೊಡಲು ಅವಕಾಶವಿದೆ. ನಮಗೇಕೆ ನೀಡಲ್ಲ ಎಂದು ಬಾಲಕರು ಪಟ್ಟುಬಿಡದಿದ್ದಾಗ ಪ್ರಾಂಶುಪಾಲರು, ಶಾಲೆ ನೀತಿಗೆ ವಿರೋಧವಾಗಿ ಶಾರ್ಟ್ಸ್ ತೊಟ್ಟರೆ ವಾರಗಳ ಕಾಲ ಏಕಾಂಗಿಯಾಗಿ ಕೂರಿಸಲಾಗುತ್ತೆ. ನಿಮಗೆ ಪ್ಯಾಂಟ್ ತೊಡುವುದು ಅಷ್ಟು ಸಮಸ್ಯೆಯಾದ್ರೆ ಹುಡುಗಿಯರ ಸ್ಕರ್ಟ್ ತೊಟ್ಟು ಬನ್ನಿ ಎಂದು ಬೈದಿದ್ದಾರೆ.
ಇದಕ್ಕೆ ರೊಚ್ಚಿಗೆದ್ದ ಬಾಲಕರು ಮಾರನೆದಿನದಿಂದ ಸ್ಕರ್ಟ್ ಧರಿಸಿ ಶಾಲೆಗೆ ಬಂರಲಾರಂಭಿಸಿದ್ದಾರೆ. ಬಾಲಕರ ಪ್ರತಿಭಟನೆಯನ್ನು ಪೋಷಕರು ಕೂಡ ಬೆಂಬಲಿಸಿದ್ದಾರೆ.