ಅಧಿಕಾರಕ್ಕೇರುತ್ತಿದ್ದಂತೆ ತಮ್ಮ ನಿರ್ಧಾರಗಳ ಮೂಲಕ ಜಗತ್ತನ್ನೇ ಬೆಚ್ಚಿಬೀಳಿಸುತ್ತಿರುವ ಅಮೇರಿಕಾದ ಅಧ್ಯಕ್ಷ ಟ್ರಂಪ್ಗೆ ಸವಾಲೆಸೆಯುವ ಮೂಲಕ 7 ವರ್ಷದ ಬಾಲಕಿಯೋರ್ವಳು ವಿಶ್ವದ ಗಮನ ಸೆಳೆದಿದ್ದಾಳೆ.
ಯುದ್ಧದ ಕರಾಳತೆ, ಭಯೋತ್ಪಾದಕರ ಅಟ್ಟಹಾಸಕ್ಕೆ ಸಿಲುಕಿ ಜರ್ಜರಿತವಾಗಿರುವ ಸಿರಿಯಾದ ಆಲೆಪ್ಪೋಇನ್ ನಗರದ ವಾಸಿಯಾಗಿರುವ ಪುಟ್ಟ ಬಾಲಕಿ ಬಾನ ಅನಬೇದ್, 24ಗಂಟೆಗಳ ಕಾಲ ಅನ್ನ-ನೀರಿಲ್ಲದೆ ನೀವು ಎಂದಾದರೂ ಬದುಕಿದ್ದೀರಾ? ನಿರಾಶ್ರಿತರು ಮತ್ತು ಸಿರಿಯಾದ ಎಳೆಯ ಮಕ್ಕಳ ಬಗ್ಗೆ ಕೂಡ ಒಮ್ಮೆ ಚಿಂತಿಸಿ, ಎಂದು ಟ್ವೀಟ್ ಮೂಲಕ ಟ್ರಂಪ್ಗೆ ಪ್ರಶ್ನಿಸಿದ್ದಾರೆ.
ಕೆಲ ಮುಸ್ಲಿಂ ರಾಷ್ಟ್ರಗಳಿಗೆ ಮಾರಕವಾಗಿರುವ ವಲಸೆ ನೀತಿಯ ಜಾರಿಗೆ ತಂದಿರುವ ಟ್ರಂಪ್ ನಮ್ಮದೇಶದಿಂದ ಕೆಟ್ಟ ಜನರನ್ನು ಹೊರಗಿಡುವುದು ಇದರ ಉದ್ದೇಶ ಎಂದಿದ್ದರು. ಈ ನಡೆಗೆ ಪ್ರತಿಕ್ರಿಯಿಸಿರುವ ಬಾಲಕಿ, ನಾನು ಬಾಲಕಿಯೇ? ಎಂದು ಪ್ರಶ್ನಿಸುವ ಮೂಲಕ ಟ್ರಂಪ್ ಇರಿಸುಮುರಿಸು ಪಟ್ಟುಕೊಳ್ಳುವಂತೆ ಮಾಡಿದ್ದಾಳೆ.
ಸಿರಿಯಾ ಸೇರಿದಂತೆ ಏಳು ಮುಸ್ಲಿಂ ರಾಷ್ಟ್ರಗಳಿಂದ ತಮ್ಮ ದೇಶಕ್ಕೆ ವಲಸೆ ಬರುವದನ್ನು ನಿಷೇಧಿಸಿ ಟ್ರಂಪ್ ಕಳೆದ ವಾರ ಆದೇಶಿಸಿದ್ದರು. ಅವರ ಈ ನಡೆಗೆ ವಿಶ್ವದಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.