ದಾಳಿಕೋರರು ಮೊದಲು ಕಾಬೂಲ್ನ ಪಶ್ಚಿಮ ಭಾಗದಲ್ಲಿರುವ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ್ದು ಈ ಘಟನೆಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಸ್ಫೋಟದ ನಂತರ ಗುಂಡಿನ ಚಕಮಕಿ ನಡೆದಿರುವ ಹಿನ್ನಲೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಎಂದು ಕಾಬೂಲ್ನ ಮುಖ್ಯ ಪೊಲೀಸ್ ಅಧಿಕಾರಿ ದಾವುದ್ ಅಮಿನ್ ತಿಳಿಸಿದ್ದಾರೆ. ಹಾಗೇ ಈ ದಾಳಿಯ ಹೊಣೆಯನ್ನು ಐ.ಎಸ್ ಉಗ್ರ ಸಂಘಟನೆ ತೆಗೆದುಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ