ಚೀನಾ : ಕಿವಿಯಲ್ಲಿ ತುರಿಕೆ ಎಂದು ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದ ವ್ಯಕ್ತಿಯೊಬ್ಬನ ಕಿವಿಯಲ್ಲಿರುವುದನ್ನು ಕಂಡು ಒಂದು ಕ್ಷಣ ವೈದ್ಯರೇ ದಂಗಾಗಿದ್ದಾರೆ.
ಹೌದು. ಲೀ ಎಂಬಾತನಿಗೆ ಕೆಲವು ದಿನಗಳಿಂದ ಕಿವಿಯಲ್ಲಿ ತುರಿಕೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಚೀನಾ ಯಾಂಗ್ಝೌ ಯೂನಿವರ್ಸಿಟಿ ಮೆಡಿಕಲ್ ಸ್ಕೂಲ್ ನ ಇ.ಎನ್.ಟಿ. ತಜ್ಞರ ಬಳಿ ಬಂದಿದ್ದಾನೆ. ಅಲ್ಲಿ ವೈದ್ಯರು ಎಂಡೋಸ್ಕೋಪ್ ಮೂಲಕ ಆತನ ಕಿವಿಯನ್ನು ಪರೀಕ್ಷಿಸಿದಾಗ ಅಲ್ಲಿ ಸಣ್ಣ ಜೇಡರ ಹುಳ ಇರುವುದು ಕಾಣಿಸಿತು. ಅಷ್ಟೇ ಅಲ್ಲದೇ ಆ ಜೇಡ ಆತನ ಕಿವಿಯ ನಾಳವನ್ನೇ ಮುಚ್ಚುವಂತೆ ಬಲೆಯನ್ನು ಹೆಣೆದಿದೆಯಂತೆ.
ತಕ್ಷಣವೇ ವೈದ್ಯರು ಕಿವಿ ನಾಳದ ಭಾಗಕ್ಕೆ ಔಷಧಿಯನ್ನು ಹಾಕಿ ಜೇಡ ನೆಯ್ದಿದ್ದ ಬಲೆಯನ್ನು ತೆಗೆದಿದ್ದಾರೆ ಮಾತ್ರವಲ್ಲದೇ ಸೂಜಿಯ ಸಹಾಯದಿಂದ ಆ ಜೇಡರ ಹುಳವನ್ನೂ ಸಹ ಹೊರತೆಗೆದಿದ್ದಾರೆ. ಇದೀಗ ಜೇಡರ ಹುಳವನ್ನು ಹೊರತೆಗೆಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.