ಸೌದಿ ಅರೇಬಿಯಾ : ರಷ್ಯಾದ ಕ್ಷಿಪಣಿಗಳನ್ನು ಖರೀದಿಸಿದರೆ ಕತಾರ್ ವಿರುದ್ದ ದಾಳಿ ನಡೆಸುವುದಾಗಿ ಸೌದಿ ಅರೇಬಿಯಾ ಗಂಭೀರ ಎಚ್ಚರಿಕೆಯೊಂದನ್ನು ನೀಡಿದೆ.
ಕತಾರ್ ಇಸ್ಲಾಮಿಕ್ ಉಗ್ರಗಾಮಿಗಳಿಗೆ ಬೆಂಬಲ ನೀಡುತ್ತಿದೆ ಹಾಗೂ ಕಲಹಪ್ರಿಯ ದೇಶ ಇರಾನ್ ಜೊತೆ ನಿಕಟ ಸಂಬಂಧ ಹೊಂದಿದೆ ಎಂದು ಆರೋಪಿಸಿ ಸೌದಿ ಅರೇಬಿಯಾ, ಕತಾರ್ ಜೊತೆಗಿನ ತನ್ನ ಸಂಬಂಧವನ್ನು ಕಡಿದುಕೊಂಡಿತ್ತು. ಆನಂತರ ಇದೇ ಕಾರಣ ನೀಡಿ ಕತಾರ್ ಮೇಲೆ ಆರ್ಥಿಕ ದಿಗ್ಬಂಧನಗಳನ್ನು ಕೂಡ ವಿಧಿಸಿತ್ತು.
ಈ ಕಾರಣಗಳಿಂದ ಕಳೆದ ವರ್ಷದಿಂದಲೂ ಈ ಎರಡೂ ದೇಶಗಳು ಪರಸ್ಪರ ಹಗೆತನದ ದಾಳಿಯ ಬೆದರಿಕೆ ಹಾಕಿತ್ತಿದ್ದು, ಆದರೆ ಇದೀಗ ರಷ್ಯಾದಿಂದ ಎಸ್-400 ವಾಯು ರಕ್ಷಣಾ ಕ್ಷಿಪಣಿಗಳನ್ನು ಖರೀದಿಸಿದ್ದೇ ಆದರೆ ಕತಾರ್ ವಿರುದ್ದ ಸೇನಾ ಕಾರ್ಯಾಚರಣೆ ನಡೆಸುವುದಾಗಿ ಸೌದಿ ಅರೇಬಿಯಾ ಗಂಭೀರ ಎಚ್ಚರಿಕೆ ನೀಡಿದೆ. ಇದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ