ಸೌದಿ ಅರೇಬಿಯಾ : ಸೌದಿ ಅರೇಬಿಯಾ ಸರ್ಕಾರವು ಮಹಿಳೆಯರ ಮೇಲಿನ ದೌರ್ಜನ್ಯಗಳ ವಿರುದ್ಧ ಕಾನೂನು ಕ್ರಮವೊಂದನ್ನು ಜಾರಿ ಮಾಡಿದೆ.
ಈ ಕಾನೂನಿನ ಪ್ರಕಾರ ಸೌದಿ ಅರೇಬಿಯಾದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯಕ್ಕೆ 5 ವರ್ಷ ಜೈಲು ಮತ್ತು 53 ಲಕ್ಷ ರೂ. (80 ಸಾವಿರ ಡಾಲರ್) ದಂಡ ವಿಧಿಸಬಹುದಾಗಿದೆ. ಸಂಪುಟಕ್ಕೆ ಸಲಹೆಗಳನ್ನು ನೀಡುವ ಸೌದಿಯ ಶೂರಾ ಮಂಡಳಿ ಸೋಮವಾರದಂದು ಈ ಬಗ್ಗೆ ಕರಡು ಮಸೂದೆಯನ್ನು ಮಂಡಿಸಿದ್ದು, ಈ ಕಾನೂನಿಗೆ ಸೌದಿ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ ಎಂಬುದಾಗಿ ತಿಳಿದುಬಂದಿದೆ.
ಇತ್ತೀಚಿನ ದಿನಗಳಲ್ಲಿ ಸೌದಿಯಲ್ಲಿ ಹಲವಾರು ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿರುವ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ನೇತೃತ್ವದ ಸರ್ಕಾರ ಈಗಾಗಲೇ ಚಿತ್ರ ಮಂದಿರಗಳಿಗೆ ದಶಕಗಳಿಂದ ಮಹಿಳೆಯರ ಮೇಲಿದ್ದ ನಿಷೇಧ ಹಾಗೂ ಮಹಿಳೆಯರ ವಾಹನ ಚಾಲನೆ ಮೇಲೆ ವಿಧಿಸಲಾಗಿರುವ ನಿಷೇಧವನ್ನು ತೆರವುಗೊಳಿಸಿದೆ. ಕಾರ್ಯಕ್ರಮಗಳಿಗೆ ಪುರುಷರ ಜತೆ ಮಹಿಳೆಯರಿಗೂ ಮುಕ್ತ ಪ್ರವೇಶ ನೀಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ