ಸಮುದ್ರ, ಸಾಗರ ಜನರಿಗೆ ಸದಾ ರಹಸ್ಯಮಯವಾಗಿಯೇ ಕಂಡಿದೆ. ಕೇವಲ ಸಮುದ್ರವಷ್ಟೇ ಅಲ್ಲ, ಅಲ್ಲಿನ ಜೀವಗಳು ಸಹ ನಿಗೂಢಮಯವಾಗಿಯೇ ಕಾಡುತ್ತಿವೆ. ಆಗಾಗ ಸಿಗುವ ಅಪರಿಚಿತ ಜೀವಿಗಳು ಮನುಷ್ಯನ ಕುತೂಹಲವನ್ನು ಹೆಚ್ಚಿಸುತ್ತಲೇ ಇವೆ.
ಇತ್ತೀಚಿಗೆ ಆಸ್ಟ್ರೇಲಿಯಾದಲ್ಲಿ ನಡೆದದ್ದು ಅದೇ. ಸಮುದ್ರದ ಆಳದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮೀನುಗಾರರಿಗೆ ಒಂದು ವಿಚಿತ್ರ ಜೀವಿ ಸಿಕ್ಕಿದ್ದು ಅದು ಯಾವ ಜೀವಿ ಎಂಬುದು ಯಾರಿಗೂ ತಿಳಿದಿಲ್ಲ.
ಈ ಜೀವಿಯ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಸಮುದ್ರದ 300ಮೀಟರ್ ಆಳದಲ್ಲಿ ಮೀನು ಹಿಡಿಯುವಾಗ ಈ ಜೀವಿ ಬಲೆಗೆ ಸಿಕ್ಕಿದ್ದು ಇದಕ್ಕಿಂತ ಮೊದಲು ಇಂತಹ ಜೀವಿಯನ್ನು ನೋಡಿರಲಿಲ್ಲ ಎಂದು ಮೀನುಗಾರರು ಹೇಳುತ್ತಿದ್ದಾರೆ.
ಆದರೆ, ಸಾಗರ ತಜ್ಞರು ಹೇಳುವ ಪ್ರಕಾರ, ಇದು ಮೀನಿನ ಜಾತಿಗೆ ಸೇರಿದ ಪ್ರಾಣಿಯಾಗಿದ್ದು, ಸಮುದ್ರದ ಆಳದಲ್ಲಿ ಕಡುಬರುತ್ತದೆ. ಇದೊಂದು ಅಪರೂಪದ ಜೀವಿಯಾಗಿದ್ದು, ಅವುಗಳ ಸಂಖ್ಯೆ ಸಾಕಷ್ಟು ಕ್ಷೀಣಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಿತ್ರ ಜೀವಿಯ ಬಗ್ಗೆ ಚರ್ಚೆ ಆರಂಭವಾಗಿದೆ. ಆದರೆ ಇದು ಯಾವ ಜೀವಿ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ.