ಜಗತ್ತು ಬದಲಾದಂತೆ ಹಣ ಮಾಡುವ ಮಾರ್ಗಗಳೂ ಬದಲಾಗುತ್ತಿವೆ, ಕೆಲವರು ತಮ್ಮ ಆದಯದ ಶೈಲಿಯಿಂದ ಜಗತ್ತನ್ನೇ ಬೆಚ್ಚಿಬೀಳಿಸುತ್ತಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕಂಡು ಬರುತ್ತಿರುವ ಶುಗರ್ ಡ್ಯಾಡಿಮ ಶುಗರ್ ಬೇಬಿ ಸಂಸ್ಕೃತಿಯ ಜೊತೆ ಕನ್ಯತ್ವ ಮಾರಾಟವೂ ಶುರುವಾಗಿದೆ.
ರೊಮೇನಿಯಾದ 18 ವರ್ಷದ ಯುವತಿ ಅಲೆಗ್ಸಾಂಡ್ರಾ ಕೆಫ್ರೆನ್ ತನ್ನ ವಿದ್ಯಾಭ್ಯಾಸ ಮತ್ತು ಕುಟುಂಬದ ಖರ್ಚುಗಳಿಗಾಗಿ ತನ್ನ ಕನ್ಯತ್ವವನ್ನೇ ಮಾರಾಟಕ್ಕಿಟ್ಟಿದ್ದಳು. ಹಾಂಕಾಂಗ್`ನ ಉದ್ಯಮಿಯೊಬ್ಬ 2.5 ಮಿಲಿಯನ್ ಯೂರೋ(ಸುಮಾರು 18 ಕೋಟಿ)ಗೆ ಖರಿದಿಸಿರುವುದಾಗಿ ವರದಿಯಾಗಿದೆ.
ಜರ್ಮನ್ ಎಸ್ಕಾರ್ಟ್ ಕಂಪನಿ ಮೂಲಕ ತನ್ನ ಮೊದಲ ಸೆಕ್ಸ್ ಅನುಭವವನ್ನ ಕೆಫ್ರೆನ್ ಕಳೆದ ವರ್ಷವೇ ಮಾರಾಟಕ್ಕಿಟ್ಟಿದ್ದಳು. ಯುವತಿಯ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣ ಮತ್ತು ಕುಟುಂಬದಿಂದಲೂ ವಿರೋಧ ವ್ಯಕ್ತವಾಗಿತ್ತು. ನಿರ್ಧಾರ ಹಿಂಪಡೆಯುವಂತೆ ಕುಟುಂಬ ಸದಸ್ಯರು ಒತ್ತಾಯಿಸಿದ್ದರೂ ಕೆಫ್ರೆನ್ ಯಾರ ಮಾತನ್ನೂ ಕೇಳಿರಲಿಲ್ಲ.
ಮುಂದೊಂದು ದಿನ ನನ್ನನ್ನ ಮದುವೆಯಾಗಿ ಯಾವಾಗ ಬೇಕಾದರೂ ಕೈಕೊಡುವ ಗಂಡನಿಗೆ ನನ್ನ ಕನ್ಯತ್ವ ನೀಡುವುದಕ್ಕಿಂತ ಅದನ್ನ ನನ್ನ ಲಾಭಕ್ಕೆ ಬಳಸಿಕೊಳ್ಳುತ್ತಿದ್ದೇನೆ ಎಂದು ಅಲೆಗ್ಯಾಂಡ್ರಾ ಹೇಳಿದ್ದರು.