ಲಂಡನ್ : ಭಾರತ ಮೂಲದ ರಿಷಿ ಸುನಾಕ್ ಮುಂದೆ ಬ್ರಿಟನ್ ಪ್ರಧಾನಿಯಾಗುತ್ತಾರಾ ಹೀಗೊಂದು ಪ್ರಶ್ನೆ ಎದ್ದಿದೆ.
ಅಧಿಕಾರಕ್ಕೆ ಏರಿದ ಕೆಲ ದಿನದಲ್ಲೇ ತಮ್ಮ ಪಕ್ಷದ ಸಂಸದರ ವಿಶ್ವಾಸವನ್ನು ಕಳೆದುಕೊಂಡಿರುವ ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಅವರ ಬದಲು ರಿಷಿ ಸುನಾಕ್ ಪ್ರಧಾನಿಯಾಗುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.
ಪ್ರಧಾನಿ ಹುದ್ದೆಯನ್ನು ಏರುವ ಮೊದಲು ಲಿಜ್ ಟ್ರಸ್ ಹಲವು ಅಶ್ವಾಸನೆ ನೀಡಿದ್ದರು. ಆದರೆ ಅಧಿಕಾರಕ್ಕೆ ಏರಿದ ಬಳಿಕ ಟ್ರಸ್ಟ್ ಉಲ್ಟಾ ಹೊಡೆದ ಹಿನ್ನೆಲೆಯಲ್ಲಿ ರಿಷಿ ಸುನಾಕ್ ಈಗ ಬುಕ್ಕಿಗಳ ಫೇವರಿಟ್ ಆಗಿದ್ದಾರೆ.
ಅಧಿಕಾರಕ್ಕೆ ಬಂದ ಬಳಿಕವೂ ಹಣದುಬ್ಬರ ನಿಯಂತ್ರಣಕ್ಕೆ ಬಂದಿಲ್ಲ. ಸಚಿವೆಯಾಗಿದ್ದಾಗ ಟ್ರಸ್ ಅವರ ಆಪ್ತರಾಗಿದ್ದ ಕ್ಯಾಸಿ ಕ್ವಾರ್ಟೆಂಗ್ರನ್ನು ಹುದ್ದೆಯಿಂದ ತೆಗೆದುಹಾಕಿದ್ದಕ್ಕೆ ಸಂಸದರು ಟ್ರಸ್ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದರು. ಆರ್ಥಿಕತೆಯನ್ನು ಸರಿ ಮಾಡುವ ನಿಟ್ಟಿನಲ್ಲಿ ಟ್ರಸ್ ಕೈಗೊಂಡ ಹಠಾತ್ ನಿರ್ಧಾರಗಳಿಗೆ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ.