ವಾಷಿಂಗ್ಟನ್ : ಸೂಕ್ತ ಹಾಗೂ ಕ್ರಮಬದ್ಧರೀತಿಯಲ್ಲಿ ದಾಖಲೆಗಳನ್ನು ಹೊಂದಿರುವ 2 ಲಕ್ಷಕ್ಕೂ ಅಧಿಕ ಮಂದಿ ಕಾನೂನುಬದ್ಧ ವಲಸಿಗರಿಗೆ ಅನುಕೂಲವಾಗುವಂತೆ ಅಮೆರಿಕದಲ್ಲಿ ಗ್ರೀನ್ಕಾರ್ಡ್ ನೀಡುವ ಬಗ್ಗೆ ಸಂಸತ್ನಲ್ಲಿ ಮಸೂದೆ ಮಂಡಿಸಲಾಗಿದೆ.
ಬೈಪಾರ್ಟಿಸಾನ್ ಲೆಜಿಸ್ಲೇಶನ್ ಎಂದು ಕರೆಯಲಾಗುವ ಈ ಮಸೂದೆ ಅಂಗೀಕಾರಗೊಂಡದಲ್ಲಿ ಭಾರತೀಯ ಮೂಲದ ಟೆಕಿಗಳು ಸೇರಿದಂತೆ ಹೆಚ್ಚಿನವರಿಗೆ ಅನುಕೂಲವಾಗಲಿದೆ. ಸಂಸದರಾದ ಅಲೆಕ್ಸ್ ಪಡಿಲ್ಲಾ ಮತ್ತು ರ್ಯಾಂಡ್ ಪೌಲ್ ಸಂಸತ್ನಲ್ಲಿ ಮಂಡಿಸಿದ್ದಾರೆ.
ಕಾನೂನುಬದ್ಧ ವಲಸಿಗರ ಮಕ್ಕಳು 21 ವರ್ಷ ಪೂರ್ಣವಾಗುವ ಮೊದಲು ಗ್ರೀನ್ಕಾರ್ಡ್ ಸಿಗದೇ ಇದ್ದರೆ ಅವರನ್ನು ಅಮೆರಿಕದಿಂದ ಗಡೀಪಾರು ಮಾಡುವ ಅವಕಾಶ ಬರುತ್ತದೆ. ಇಲ್ಲದೇ ಇದ್ದರೆ ಅವರು ವಲಸಿಗರಾಗಿಯೇ ಉಳಿಯಬೇಕಾಗುತ್ತದೆ. ದೇಶದ ಅರ್ಥವ್ಯವಸ್ಥೆಗೆ ಕಾನೂನು ಬದ್ಧ ವಲಸಿಗರು ಅತ್ಯುತ್ತಮ ಕೊಡುಗೆ ನೀಡಿದ್ದಾರೆ.
ಹೀಗಾಗಿ, ಅವರನ್ನು ನಿರ್ಲಕ್ಷಿಸುವಂತೆ ಇಲ್ಲ. ಹೀಗಾಗಿ, ಅವರಿಗೆ ಇರುವ ಅನಿಶ್ಚಿತತೆ ನಿವಾರಿಸಬೇಕಾಗಿದೆ ಎಂದು ಸಂಸದರಾದ ಅಲೆಕ್ಸ್ ಪಡಿಲ್ಲಾ ಮತ್ತು ರ್ಯಾಂಡ್ ಪೌಲ್ ಹೇಳಿದ್ದಾರೆ.