ಸಶಸ್ತ್ರ ಪಡೆಗಳ ವಿರುದ್ಧ ದ್ವೇಷ ಭಾವನೆ ಸಷ್ಟಿಸುವಂತಹ ಮತ್ತು ಜನತೆಯನ್ನು ಪ್ರಚೋದಿಸುವಂತಹ ಹೇಳಿಕೆ ನೀಡಿದ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಐ ಎಂ ಪಾಕಿಸ್ತಾನ್ ಪಾರ್ಟಿಯ ಸ್ವಯಂಘೋಷಿತ ಅಧ್ಯಕ್ಷರು ಮತ್ತು ವಕೀಲರಾದ ಇಶ್ತಿಯಾಕ್ ಅಹ್ಮದ್ ಮಿರ್ಜಾ ರಾವ್ಪಿಂಡಿಯಲ್ಲಿರುವ ಸಿವಿಲ್ ಲೈನ್ ಪೋಲಿಸ್‌ಠಾಣೆಯಲ್ಲಿ ಪ್ರಧಾನಿ ನವಾಜ್ ಷರೀಪ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಧಾನಿ ನವಾಜ್ ಷರೀಫ್ ಸಶಸ್ತ್ರ ಪಡೆಗಳ ವಿರುದ್ಧ ದ್ವೇಷ ಭಾವನೆ ಸಷ್ಟಿಸುವಂತಹ ಮತ್ತು ಜನತೆಯನ್ನು ಪ್ರಚೋದಿಸುವಂತಹ ಹೇಳಿಕೆ ನೀಡಿರುವ ವಿಡಿಯೋ ವಾಟ್ಸಪ್‌ನಲ್ಲಿ ಲಭ್ಯವಿದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ ದೇಶ ಸ್ವತಂತ್ರಗೊಂಡ 70 ವರ್ಷಗಳ ಇತಿಹಾಸದಲ್ಲಿ 33 ವರ್ಷಗಳ ಕಾಲ ಪಾಕಿಸ್ತಾನ ಸೇನೆ ಅಡಳಿತ ನಡೆಸಿದ್ದಲ್ಲದೇ ರಾಜಕೀಯ ವಲಯದಲ್ಲಿ ಭಾರಿ ಪ್ರಭಾವವನ್ನು ಹೊಂದಿರುವುದನ್ನು ತಳ್ಳಿಹಾಕುವಂತಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.