ನವದೆಹಲಿ: ಪ್ರಧಾನಿ ಮೋದಿ ಮಂಗಳವಾರ ಇಸ್ರೇಲ್ ದೇಶಕ್ಕೆ ಭೇಟಿ ನೀಡಲಿದ್ದಾರೆ. ಈ ಮೂಲಕ ಅವರು ಹೊಸದೊಂದು ದಾಖಲೆ ಮಾಡಲಿದ್ದಾರೆ.
ಇಸ್ರೇಲ್ ದೇಶಕ್ಕೆ ಭೇಟಿ ನೀಡುವ ಮೊದಲ ಭಾರತೀಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ. ಉಭಯ ದೇಶಗಳ ನಡುವೆ ರಕ್ಷಣಾ ಸಲಕರಣೆ ಮತ್ತು ಇತರ ವಿಷಯಗಳಲ್ಲಿ ಬೆಳೆಯುತ್ತಿರುವ ಬಾಂಧವ್ಯ ವೃದ್ಧಿಗೆ ಪ್ರಧಾನಿ ಭೇಟಿ ಸಹಕಾರಿಯಾಗಲಿದೆ.
ಭಾರತಕ್ಕೆ ರಕ್ಷಣಾ ಸಲಕರಣೆಗಳನ್ನು ಆಮದು ಮಾಡಿಕೊಳ್ಳುವ ಪ್ರಮುಖ ರಾಷ್ಟ್ರ ಇಸ್ರೇಲ್ ಆಗಿರುವುದರಿಂದ ಪ್ರಧಾನಿ ಭೇಟಿ ಮಹತ್ವದ್ದಾಗಲಿದೆ. ಅತ್ತ ಇಸ್ರೇಲ್ ಕೂಡಾ ಭಾರತದಂತಹ ದೊಡ್ಡ ಆರ್ಥಿಕತೆಯ ರಾಷ್ಟ್ರದೊಂದಿಗೆ ಸ್ನೇಹ ಬೆಳೆಸುವುದು ರಾಜತಾಂತ್ರಿಕ ವಿಜಯ ಎಂದೇ ಭಾವಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ