Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡೊನಾಲ್ಡ್ ಟ್ರಂಪ್ ಜತೆ ಡಿನ್ನರ್ ಮಾಡುವ ಮೊದಲ ವಿಶ್ವ ನಾಯಕ ಪ್ರಧಾನಿ ಮೋದಿ

ಡೊನಾಲ್ಡ್ ಟ್ರಂಪ್ ಜತೆ ಡಿನ್ನರ್ ಮಾಡುವ ಮೊದಲ ವಿಶ್ವ ನಾಯಕ ಪ್ರಧಾನಿ ಮೋದಿ
NewDelhi , ಶನಿವಾರ, 24 ಜೂನ್ 2017 (09:40 IST)
ನವದೆಹಲಿ: ಇಂದಿನಿಂದ ಪ್ರಧಾನಿ ಮೋದಿ ಮೂರು ರಾಷ್ಟ್ರಗಳ ವಿದೇಶ ಯಾತ್ರೆ ಆರಂಭವಾಗಲಿದ್ದು, ಅಮೆರಿಕಾ ಭೇಟಿ ಮಹತ್ವದ್ದಾಗಿದೆ. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದ ಮೇಲೆ ಆ ದೇಶಕ್ಕೆ ಮೋದಿ ಮೊದಲ ಭಾರಿ ಭೇಟಿ ನೀಡುತ್ತಿದ್ದಾರೆ.

 
ಮೊದಲು ಪೋರ್ಚುಗಲ್ ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ನಂತರ ಅಮೆರಿಕಾಗೆ ತೆರಳಲಿದ್ದಾರೆ. ಅಂತಿಮವಾಗಿ ನೆದರ್ ಲ್ಯಾಂಡ್ಸ್ ಗೆ ಭೇಟಿ ನೀಡಿ ಭಾರತಕ್ಕೆ ವಾಪಸಾಗಲಿದ್ದಾರೆ.

ಇದರಲ್ಲಿ ಡೊನಾಲ್ಡ್ ಟ್ರಂಪ್ ಭೇಟಿ ಮಹತ್ವದ್ದಾಗಿದೆ. ಟ್ರಂಪ್ ಜತೆ ಔತಣಕೂಟದಲ್ಲಿ ಪಾಲ್ಗೊಳ್ಳಲಿರುವ ಮೊದಲ ವಿಶ್ವನಾಯಕ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಲಿದ್ದಾರೆ. ಈ ಸಂದರ್ಭದಲ್ಲಿ ಹಲವು ಮಹತ್ವದ ವಿಚಾರಗಳ ಕುರಿತು ಟ್ರಂಪ್ ಜತೆ ಮೋದಿ ಚರ್ಚಿಸಲಿದ್ದಾರೆ.

ಆದರೆ ಭಾರತೀಯರಿಗೆ ತೊಂದರೆಯುಂಟು ಮಾಡುತ್ತಿರುವ ಹೊಸ ವೀಸಾ ನೀತಿ ಕುರಿತು ಮೋದಿ ಭೇಟಿ ಸಂದರ್ಭದಲ್ಲಿ ಚರ್ಚೆಯಾಗುವ ಸಂಭವ ಕಡಿಮೆ ಎನ್ನಲಾಗಿದೆ.  ಉಭಯ ನಾಯಕರ ಮಾತುಕತೆಯ ನಂತರ ಜಂಟಿ ಸುದ್ದಿಗೋಷ್ಠಿಯೂ ನಡೆಯಲಿದೆ. ಮೋದಿ ಭೇಟಿಗಾಗಿ ಟ್ರಂಪ್ ಉತ್ಸುಕರಾಗಿದ್ದು, ಶ್ವೇತಭವದಲ್ಲಿ ಔತಣ ಕೂಟಕ್ಕೆ ಭರ್ಜರಿ ತಯಾರಿ ನಡೆದಿದೆ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌiನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೂರು ವರ್ಷ ಆಧಾರ್ ಬಳಸದಿದ್ರೆ ನಿಷ್ಕ್ರಿಯ! ಪತ್ತೆ ಹೇಗೆ ಇಲ್ಲಿ ನೋಡಿ