ನವದೆಹಲಿ: ಚೀನಾದ ಕ್ಸಿಯಾಮೆನ್ ನಲ್ಲಿ ನಡೆಯುತ್ತಿರುವ 9 ನೇ ಬ್ರಿಕ್ಸ್ ಸಮ್ಮೇಳನದಲ್ಲಿ ಭಾರತದ ಪ್ರಧಾನಿ ಮೋದಿ ಭಾಷಣ ಮಾಡಿದ್ದು, ಶಾಂತಿ ಮಂತ್ರ ಪಠಿಸಿದ್ದಾರೆ.
ಬ್ರಿಕ್ಸ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಮೋದಿ, ಬ್ರಿಕ್ಸ್ ದೇಶಗಳ ನಡುವೆ ಪರಸ್ಪರ ಸಹಕಾರ, ಶಾಂತಿ ಅತ್ಯಗತ್ಯ. ಭಯೋತ್ಪಾದನೆ ನಿಗ್ರಹ ನಮ್ಮ ಮುಖ್ಯ ಅಜೆಂಡವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ಯುವ ಸಮೂಹವೇ ನಮ್ಮ ಶಕ್ತಿ ಎಂದಿರುವ ಪ್ರಧಾನಿ ಮೋದಿ, ಡಿಜಿಟಲ್ ಕ್ರಾಂತಿಯ ಅಗತ್ಯತೆಯನ್ನು ಪ್ರತಿಪಾದಿಸಿದರು. ಯಾವಾಗಲೂ ಹಿಂದಿಯಲ್ಲಿ ನಿರ್ಗಳವಾಗಿ ಮಾತನಾಡುವ ಮೋದಿ ಬ್ರಿಕ್ಸ್ ಸಮ್ಮೇಳನದಲ್ಲಿ ಆಂಗ್ಲ ಭಾಷೆಯ ಲಿಖಿತ ಭಾಷಣ ಓದಿದರು.
ಡೋಕ್ಲಾಂ ವಿವಾದ ಮುಗಿದ ಬೆನ್ನಲ್ಲೇ ಚೀನಾಗೆ ಭೇಟಿ ಕೊಟ್ಟಿರುವ ಭಾರತೀಯ ಪ್ರಧಾನಿಗೆ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಆತ್ಮೀಯ ಸ್ವಾಗತ ನೀಡಿದರು. ನಂತರ ಬ್ರಿಕ್ಸ್ ನಾಯಕರು ಒಟ್ಟಾಗಿ ಒಂದೇ ವೇದಿಕೆಯಲ್ಲಿ ನಿಂತು ಫೋಟೋಗೆ ಪೋಸ್ ನೀಡಿದರು.