ನವದೆಹಲಿ: ನಿನ್ನೆಯಷ್ಟೇ ಉತ್ತರ ಪ್ರದೇಶ ಚುನಾವಣಾ ಗೆಲುವಿಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿಗೆ ಶುಭ ಕೋರಿದ್ದರು. ಇಂದೀಗ ಮೋದಿ ಅಮೆರಿಕಾ ಪ್ರವಾಸ ಮಾಡಲಿದ್ದಾರೆಂದು ವೈಟ್ ಹೌಸ್ ಮೂಲಗಳು ಹೇಳಿವೆ.
ವರ್ಷಾಂತ್ಯಕ್ಕೆ ಮೋದಿ ಅಮೆರಿಕಾ ಪ್ರವಾಸ ಮಾಡಲಿದ್ದಾರೆ ಎಂದು ವೈಟ್ ಹೌಸ್ ಹೇಳಿಕೊಂಡಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೋದಿ ಭೇಟಿ ಮಾಡಲು ಉತ್ಸುಕರಾಗಿದ್ದಾರೆ ಎಂದು ಅದು ಹೇಳಿಕೊಂಡಿದೆ.
ಅಧ್ಯಕ್ಷರಾದ ಮೇಲೆ ಟ್ರಂಪ್ ಎರಡು ಬಾರಿ ದೂರವಾಣಿ ಮೂಲಕ ಪ್ರಧಾನಿ ಮೋದಿ ಜತೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಮೋದಿಯನ್ನು ಒಬ್ಬ ಶ್ರೇಷ್ಠ ವ್ಯಕ್ತಿ ಎಂದು ಹೊಗಳಿದ್ದರು. ಒಬಾಮಾ ಅಧ್ಯಕ್ಷರಾಗಿದ್ದಾಗ ಅಮೆರಿಕಾ ಜತೆ ಭಾರತ ಉತ್ತಮ ಬಾಂಧವ್ಯ ಹೊಂದಿತ್ತು. ಆಗ ನಾಲ್ಕು ಬಾರಿ ಅಮೆರಿಕಾಕ್ಕೆ ಭೇಟಿ ಮಾಡಿದ್ದ ಮೋದಿಗೆ ಅಭೂತಪೂರ್ವ ಸ್ವಾಗತ ದೊರಕಿತ್ತು. ಈಗಲೂ ಅದನ್ನೇ ಮುಂದುವರಿಸುವ ನಿರೀಕ್ಷೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ