ವಾಷಿಂಗ್ಟನ್: ವಿಮಾನ ಪ್ರಯಾಣವೆಂದರೆ ಅದರದ್ದೇ ಆದ ಕೆಲವು ಶಿಸ್ತು, ನಿಯಮಗಳಿರುತ್ತವೆ. ಅದನ್ನು ಉಲ್ಲಂಘಿಸಿದ್ದಕ್ಕೆ ಇಲ್ಲೊಬ್ಬ ವ್ಯಕ್ತಿಯನ್ನು ವಿಮಾನದಿಂದಲೇ ಹೊರ ಹಾಕಿದ ಘಟನೆ ಅಮೆರಿಕಾದಲ್ಲಿ ನಡೆದಿದೆ.
ಅಟ್ಲಾಂಟಾದಿಂದ ಮಿಲ್ವಾಕೀಗೆ ಪ್ರಯಾಣಿಸುತ್ತಿದ್ದ ಡೆಲ್ಟಾ ವಿಮಾನ ಯಾನ ಸಂಸ್ಥೆಗೆ ಸೇರಿದ ವಿಮಾನದಲ್ಲಿ ಈ ಘಟನೆ ನಡೆದಿದೆ. 39 ವರ್ಷದ ಕಿಮಾ ಹ್ಯಾಮಿಲ್ಟನ್ ಎಂಬಾತ ಹೊರ ಹಾಕಲ್ಪಟ್ಟ ವ್ಯಕ್ತಿ.
ಈತ ವಿಮಾನ ಟೇಕ್ ಆಫ್ ಆಗುವುದಾಗಿ ಪೈಲಟ್ ಘೋಷಿಸಿದ ವೇಳೆ ಟಾಯ್ಲೆಟ್ ಗೆ ಹೋಗಲು ಯತ್ನಿಸಿದ್ದ. ಆದರೆ ಸುರಕ್ಷತಾ ದೃಷ್ಟಿಯಿಂದ ಹೀಗೆ ಮಾಡುವುದು ಸರಿಯಲ್ಲ ಎಂದು ವಿಮಾನ ಸಿಬ್ಬಂದಿ ವಾಪಸ್ ಸೀಟ್ ನಲ್ಲಿ ಕೂರಿಸಿದ್ದರು.
ಆದರೆ ಅವರು ಅತ್ತ ಸಾಗಿದ ಕೂಡಲೇ ಮತ್ತೆ ಟಾಯ್ಲೆಟ್ ಗೆ ಹೋಗಲು ಯತ್ನಿಸಿದ್ದಕ್ಕೆ ಪೈಲಟ್ ಆತನನ್ನು ಹೊರ ಹೋಗುವಂತೆ ಆದೇಶಿಸಿದ್ದಾರೆ. ಆದರೆ ಇದಕ್ಕೆ ಹ್ಯಾಮಿಲ್ಟನ್ ಒಪ್ಪದಿದ್ದಾಗ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿ ನಂತರ ಮತ್ತೆ ಹ್ಯಾಮಿಲ್ಟನ್ ನ್ನು ಬಿಟ್ಟು ಉಳಿದವರೆಲ್ಲರನ್ನೂ ವಾಪಸ್ ವಿಮಾನದೊಳಕ್ಕೆ ಕಳುಹಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ