ಢಾಕಾ : ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಮೆಟ್ಟಿಲು ಮೇಲೆ ಕುಳಿತು ಜೋಡಿಯೊಂದು ಕಿಸ್ ಮಾಡುತ್ತಿರುವ ಫೋಟೋವನ್ನು ಶೂಟ್ ಮಾಡಿದಕ್ಕೆ ಫೋಟೋಗ್ರಾಫರ್ ನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.
ಢಾಕಾ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಮೆಟ್ಟಿಲು ಮೇಲೆ ಕುಳಿತು ಜೋಡಿಯೊಂದು ಮುಂಗಾರು ಮಳೆಯಲ್ಲಿ ಕಿಸ್ ಮಾಡುತ್ತಿರುವಾಗ ನ್ಯೂಸ್ ಪೊರ್ಟಲ್ ನ ಫೋಟೋಗ್ರಾಫರ್ ಜಿಬೋನ್ ಅಹ್ಮದ್ ತಮ್ಮ ಕ್ಯಾಮರಾದಲ್ಲಿ ಆ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಈ ಫೋಟೋವನ್ನು 'ಸಾಂಗ್ಸ್ ಆಫ್ ರೈನ್ಸ್ - ಲೆಟ್ ಲವ್ ಬಿ ಫ್ರೀ' ಎಂಬ ಶಿರ್ಷಿಕೆ ಕೊಟ್ಟು 'Purboposhchimbd' ನ್ಯೂಸ್ ಪೊರ್ಟಲ್ನಲ್ಲಿ ಬಳಸಲಾಗಿದೆ. ನಂತರ ಈ ಕಿಸ್ಸಿಂಗ್ ಸೋಷಿಯಲ್ ಮೀಡಿಯಾದಲ್ಲಿಯೂ ಸಖತ್ ವೈರಲ್ ಆಗಿತ್ತು. ಆದರೆ ಇದಕ್ಕೆ ಬಾರೀ ಟೀಕೆಗಳು ವ್ಯಕ್ತವಾದ ಕಾರಣ ನ್ಯೂಸ್ ಪೊರ್ಟಲ್, ಇದೊಂದು ಪೂರ್ವನಿರ್ಧರಿತ ಫೋಟೋ ಆಗಿದ್ದು, ಫೋಟೋಗ್ರಾಫರ್ ಕ್ಷಮೆ ಕೇಳಿಬೇಕೆಂದು ಹೇಳಿ ಆತನನ್ನು ಕೆಲಸದಿಂದ ವಜಾಗೊಳಿಸಿದೆ.
ಇದಕ್ಕೆ ಫೋಟೋಗ್ರಾಫರ್ ಜಿಬೋನ್ ಅಹ್ಮದ್ ತಮ್ಮ ಫೇಸ್ಬುಕ್ ಮೂಲಕ ಪ್ರತಿಕ್ರಿಯಿಸಿದ್ದು, ಈ ಫೋಟೋ ಸತ್ಯ-ಮಿಥ್ಯಗಳ ಕಥೆಯನ್ನು ಹುಟ್ಟು ಹಾಕುತ್ತಿದೆ ಎಂದು ನಾನು ಊಹೆಯೇ ಮಾಡಿರಲಿಲ್ಲ.ಅಲ್ಲದೇ, ಈ ಕಿಸ್ಸಿಂಗ್ ಫೋಟೋವನ್ನು ಇತರ ಫೋಟೋಗ್ರಾಫರ್ಗಳ ಕೂಡ ಕ್ಲಿಕ್ಕಿಸಿದ್ದಾರೆ ಎಂದು ಹೇಳಿದ್ದಾನೆ. ಆದರೆ ಈ ಫೋಟೋದಲ್ಲಿರುವ ಯುವಕನಾಗಲಿ ಯುವತಿಯಾಗಲಿ ಇದುವೆರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ