ವಾಷಿಂಗ್ಟನ್: ಪಾಕಿಸ್ತಾನದಲ್ಲಿ ಉಗ್ರರಿಲ್ಲ. ಪಾಕ್ ಉಗ್ರರನ್ನು ಪೋಷಿಸುತ್ತಿಲ್ಲ ಎಂದರೆ ಯಾರಾದರೂ ನಂಬುವ ಮಾತೇ? ಹಾಗೇ ಹೇಳಲು ಹೋಗಿ ಪಾಕ್ ರಾಯಭಾರಿ ಅಮೆರಿಕಾದಲ್ಲಿ ನಗೆಪಾಟಲಿಗೀಡಾದ ಘಟನೆ ನಡೆದಿದೆ.
ವಾಷಿಂಗ್ಟನ್ ನಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಅಮೆರಿಕಾದ ಪಾಕ್ ರಾಯಭಾರಿ ಇಜಾಜ್ ಅಹಮ್ಮದ್ ಚೌದರಿ ‘ಪಾಕಿಸ್ತಾನ ಉಗ್ರರಿಗೆ ಸುರಕ್ಷಿತ ತಾಣವಲ್ಲ. ಹೀಗಾಗಿ ಉಗ್ರ ಮೌಲಾ ಒಮರ್ ಆಫ್ಘನ್ ನಿಂದ ಪಾಕಿಸ್ತಾನಕ್ಕೆ ಬರಲು ಸಾಧ್ಯವಾಗಿಲ್ಲ’ ಎಂದರು.
ಅವರ ಈ ಮಾತು ಕೇಳಿ ಇಡೀ ಸಭಾಂಗಣವೇ ನಗೆಗಡಲಲ್ಲಿ ತೇಲಿತು. ಆದರೂ ಪಟ್ಟು ಬಿಡದ ಚೌದರಿ ಮತ್ತಷ್ಟು ತಮ್ಮ ದೇಶದ ಉಗ್ರ ವಿರೋಧಿ ನಿಲುವಿನ ಬಗ್ಗೆ ಬೆನ್ನು ತಟ್ಟಿಕೊಳ್ಳುತ್ತಿದ್ದರೆ, ನೆರೆದಿದ್ದವರೆಲ್ಲಾ ಬಿದ್ದೂ ಬಿದ್ದೂ ನಕ್ಕರು.