ನವದೆಹಲಿ: ಇತ್ತೀಚೆಗೆ ನಡೆದ ಯೋಧರ ಹತ್ಯೆ ಪ್ರಕರಣದ ನಂತರ ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ರಾವತ್ ಹೇಳಿಕೆಗೆ ಪಾಕ್ ತಿರುಗೇಟು ನೀಡಿದೆ.
ನಮ್ಮದೂ ಅಣ್ವಸ್ತ್ರ ಹೊಂದಿರುವ ಸಶಕ್ತ ರಾಷ್ಟ್ರ. ಯುದ್ಧಕ್ಕೆ ನಾವೂ ಸಿದ್ಧ. ಒಂದು ವೇಳೆ ಯುದ್ಧ ನಡೆಯುವುದಿದ್ದರೆ ಅದಕ್ಕೆ ಸಂಪೂರ್ಣ ಸನ್ನದ್ಧರಾಗಿದ್ದೇವೆ’ ಎಂದು ಪಾಕ್ ಸೇನಾ ಮುಖ್ಯಸ್ಥ ಜನರಲ್ ಆಸಿಫ್ ಗಫೂರ್ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ಬಿಎಸ್ ಎಫ್ ಯೋಧನ ಪೈಶಾಚಿಕ ಹತ್ಯೆ ಮತ್ತು ಮೂವರು ಪೊಲೀಸ್ ಅಧಿಕಾರಿಗಳ ಹತ್ಯೆಯ ನಂತರ ಪಾಕ್ ವಿರುದ್ಧ ತಿರುಗಿಬಿದ್ದ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಆಕ್ರಮಣಕಾರಿ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ನಾವು ಶಾಂತಿ ಬಯಸುತ್ತೇವೆ ಎನ್ನುವುದನ್ನೇ ನಮ್ಮ ದೌರ್ಬಲ್ಯವಾಗಿ ಪರಿಗಣಿಸಬಾರದು. ನಾವೂ ಯುದ್ಧಕ್ಕೆ ರೆಡಿ ಎಂದು ಪಾಕ್ ಹೇಳಿಕೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.