ಐತಿಹಾಸಿಕ ಬೆಳವಣಿಗೆಯೊಂದರಲ್ಲಿ ದೀರ್ಘಾವಧಿಯಿಂದ ನೆನೆಗುದಿಯಲ್ಲಿದ್ದ ಹಿಂದೂ ವಿವಾಹ ಮಸೂದೆಯನ್ನು ಪಾಕಿಸ್ತಾನದ ಸಂಸತ್ ಅಂಗೀಕರಿಸಿದೆ.
ಮಾನವ ಹಕ್ಕು ಖಾತೆಯ ಸಚಿವ ಕಮ್ರಾನ್ ಮಿಚೈಲ್, ಸಂಸತ್ತಿನಲ್ಲಿ ಮಂಡಿಸಿದ ಹಿಂದೂ ವಿವಾಹ ಮಸೂದೆಗೆ ಅಂಗೀಕಾರ ದೊರೆತಿದೆ. ಇದರಿಂದಾಗಿ ದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ವಿವಾಹ ನೋಂದಣಿ ಮಾಡಿಕೊಳ್ಳುವ ಅವಕಾಶ ದೊರೆಯಲಿದೆ.
ಹಿಂದೂ ವಿವಾಹ ಮಸೂದೆ ಪ್ರಕಾರ, ಹಿಂದೂ ಸಮುದಾಯದ ಯುವಕ ಮತ್ತು ಯುವತಿಗೆ 18 ವರ್ಷವಾಗಿರಬೇಕು. ಇತರ ಸಮುದಾಯದವರಿಗೆ ಪುರುಷರಿಗೆ 18 ವರ್ಷ ಮತ್ತು ಮಹಿಳೆಯರಿಗೆ 16 ವರ್ಷ ನಿಗದಿಪಡಿಸಲಾಗಿದೆ.
ಒಂದು ವೇಳೆ, ವಿವಾಹ ಕಾಯ್ದೆಯನ್ನು ಉಲ್ಲಂಘಿಸಿದಲ್ಲಿ ಆರು ತಿಂಗಳು ಜೈಲು ಮತ್ತು 5 ಸಾವಿರ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ.
ಯುನಿಸೆಫ್ ಪ್ರಕಾರ, ಪಾಕಿಸ್ತಾನದಲ್ಲಿ ಶೇ.21 ರಷ್ಟು ಮಹಿಳೆಯರಿಗೆ 18 ವರ್ಷ ತುಂಬುವ ಮುನ್ನವೇ ವಿವಾಹ ಮಾಡಿಕೊಡಲಾಗುತ್ತದೆ. ಶೇ.3 ರಷ್ಟು ಯುವತಿಯರು 16 ವರ್ಷ ವಯಸ್ಸಿನೊಳಗೆ ವಿವಾಹವಾಗಿದ್ದಾರೆ ಎಂದು ವರದಿಯಲ್ಲಿ ಪ್ರಕಟಿಸಿದೆ.
ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರಾದ ಝೋಹ್ರಾ ಯುಸೂಫ್ ಮಾತನಾಡಿ, ಹಿಂದು ಮಹಿಳೆಯರಿಗೆ ವಿವಾಹ ನೋಂದಣಿಯಿಂದಾಗಿ ಕಾನೂನು ಬದ್ಧ ಸೌಲಭ್ಯಗಳು ದೊರೆಯಲಿವೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ