ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದೂಗಳ ಬಹುನಿರೀಕ್ಷಿತ ಹಿಂದೂ ವಿವಾಹ ಕಾಯ್ದೆ ಪಾಕಿಸ್ತಾನ ಸಂಸತ್ತಿನಲ್ಲಿ ಅವಿರೋಧವಾಗಿ ಅನುಮೋದನೆಗೊಂಡಿದೆ.
ಸೆಪ್ಟೆಂಬರ್ 26, 2015ರಲ್ಲೇ ಕೆಳಮನೆಯಿಂದ ಹಿಂದೂ ವಿವಾಹಕಾಯ್ದೆ 2017ಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು. ರಾಷ್ಟ್ರಪತಿಗಳ ಅಂಕಿತದ ಬಳಿಕ ಕಾಯ್ದೆ ಜಾರಿಗೆ ಬರಲಿದೆ. ಪಾಕಿಸ್ತಾನದಲ್ಲಿ ವಾಸವಿರುವ ಹಿಂದೂಗಳ ಮದುವೆ, ಮದುವೆ ನೋಂದಣಿ, ಪುನರ್ವಿವಾಹ, ಬೇರ್ಪಡುವುದು ಮತ್ತು ಮದುವೆಗೆ 18 ವರ್ಷದ ವಯೋಮಿತಿ ಸೇರಿದಂತೆ ಹಲವು ನಿಯಮಾವಳಿಗಳನ್ನ ಈ ವಿಸ್ತೃತ ಕಾಯ್ದೆ ಒಳಗೊಂಡಿದೆ.
ಪಾಕಿಸ್ತಾನದಲ್ಲಿ ವಾಸವಿರುವ ಹಿಂದೂಗಳ ಮೊದಲ ವೈಯಕ್ತಿಕ ವಿವಾಹ ಕಾಯ್ದೆ ಇದಾಗಿದೆ