ಪಾಕಿಸ್ತಾನ ಭಯೋತ್ಪಾದಕರನ್ನ ಹುಟ್ಟು ಹಾಕುತ್ತಿದೆ ಮತ್ತು ಅವರನ್ನ ಪೋಷಿಸುತ್ತಿದೆ ಎಂದು ಭಾರತ ಹೇಳುತ್ತಲೇ ಬಂದಿದ್ದರೂ ಕಪಟಿ ಪಾಕಿಸ್ತಾನ ಮಾತ್ರ ನಿರಾಕರಿಸುತ್ತಲೇ ಇತ್ತು. ಆದರೆ, ಇದೀಗ, ಪಾಕಿಸ್ತಾನವು ಉಗ್ರರನ್ನ ಪೋಷಿಸುತ್ತಿರುವುದಕ್ಕೆ ಬಹುದೊಡ್ಡ ಸಾಕ್ಷಿ ಸಿಕ್ಕಿದೆ.
ಹೌದು, ಸ್ವತಃ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಅಧಿಕಾರಿಯೊಬ್ಬ ಭಯೋತ್ಪಾದಕರನ್ನ ರಕ್ಷಿಸುತ್ತಿರುವ ಬಗ್ಗೆ ಬಾಯ್ಬಿಟ್ಟಿದ್ದಾನೆ. ಅಷ್ಟೇ ಅಲ್ಲ, ಇಸ್ಲಾಮಾಬಾದ್ ಹೈಕೋರ್ಟ್`ಗೆ ದೂರು ನೀಡಿದ್ದಾನೆ. ಪಾಕಿಸ್ತಾನದ ಇಂಟೆಲಿಜೆನ್ಸ್ ಬ್ಯೂರೋದ ಸಬ್ ಇನ್ಸ್`ಪೆಕ್ಟರ್ ಮಲಿಕ್ ಮುಖ್ತಾರ್ ಅಹಮ್ಮದ್ ಶಹಜಾದ್ ದೂರು ನೀಡಿದ್ದು, ಗುಪ್ತಚರ ಸಂಸ್ಥೆಯ ಹಿರಿಯ ಅಧಿಕಾರಿಗಳು ಶಂಕಿತ ಭಯೋತ್ಪಾದಕರ ಮೇಲೆ ಕ್ರಮ ಜರುಗಿಸಲಿಲ್ಲ ಎಂದು ಆರೋಪಿಸಿದ್ದಾನೆ.
ದೇಶದ ಹಲವು ಭಯೋತ್ಪಾದಕ ಸಂಘಟನೆಗಳ ಬಗ್ಗೆ ನಾನು ವರದಿ ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಸೂಕ್ತ ಸಾಕ್ಷ್ಯಾಧಾರಗಳನ್ನೂ ನೀಡಿದರೂ ಹಿರಿಯ ಅಧಿಕಾರಿಗಳು ನಿರ್ಲಕ್ಷವಹಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲ, ಈ ವಿಷಯವನ್ನ ಗುಪ್ತಚರ ಡಿಜಿ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ ಎಂದು ಅಧಿಕಾರಿ ಆರೋಪಿಸಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ