ಲಂಡನ್ : ಪಾಕಿಸ್ತಾನ ಮೂಲದ ಸಂಸದ ಸಾಜಿದ್ ಜಾವಿದ್ (48) ಅವರು ಬ್ರಿಟನ್‌ನ ನೂತನ ಗೃಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ಈ ಮೂಲಕ ಜಾವಿದ್ ಅವರು ಬ್ರಿಟನ್ ಸರ್ಕಾರದಲ್ಲಿ ಉನ್ನತ ಹುದ್ದೆಗೆ ಏರಿದ ದಕ್ಷಿಣ ಏಷ್ಯಾ ಮೂಲದ ಮೊದಲ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ವಲಸಿಗರ ಗಡಿಪಾರಿಗೆ ಸಂಬಂಧಿಸಿದಂತೆ ಸಂಸತ್ತಿಗೆ ತಪ್ಪು ಮಾಹಿತಿ ನೀಡಿದ ಕಾರಣ ಬ್ರಿಟನ್ ಗೃಹ ಕಾರ್ಯದರ್ಶಿ ಅಂಬರ್ ರುಡ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಇದೀಗ ಈ ಸ್ಥಾನಕ್ಕೆ ಸಾಜಿದ್ ಜಾವಿದ್ ಅವರು ಆಯ್ಕೆಯಾಗಿದ್ದಾರೆ.
ಜಾವಿದ್ ಅವರು ಪಾಕಿಸ್ತಾನದ ಬಸ್ ಚಾಲಕನ ಮಗನಾಗಿದ್ದು, ಅವರ ಕುಟುಂಬವು 1960ರಲ್ಲಿ ಬ್ರಿಟನ್‌ಗೆ ವಲಸೆ ಬಂದಿತ್ತು. ಇವರ ನೇಮಕದ ಮೂಲಕ ವಲಸಿಗರ ವಿವಾದಕ್ಕೆ ತೆರೆ ಎಳೆಯಲು ಪ್ರಧಾನಿ ತೆರೆಸಾ ಮೇ ಮುಂದಾಗಿದ್ದಾರೆ ಎಂಬುದಾಗಿ ತಿಳಿಯಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ