ಇಸ್ಲಾಮಾಬಾದ್: ಅಮೆರಿಕಾ ಪ್ರವಾಸ ಕೈಗೊಳ್ಳಲಿರುವ ಪ್ರಧಾನಿ ಮೋದಿ ವಿಮಾನ ಯಾನಕ್ಕೆ ತನ್ನ ವಾಯುಪ್ರದೇಶ ಬಳಸಲು ಪಾಕ್ ಅನುಮತಿ ನಿರಾಕರಿಸಿದೆ.
ಜರ್ಮನಿ ಮೂಲಕ ಅಮೆರಿಕಾಕ್ಕೆ ತೆರಳಲು ಪಾಕ್ ವಾಯುಪ್ರದೇಶ ಬಳಸಲು ಭಾರತ ಸರ್ಕಾರ ಮನವಿ ಮಾಡಿತ್ತು. ಆದರೆ ಇತ್ತೀಚೆಗಿನ ದಿನಗಳಲ್ಲಿ ಉಭಯ ದೇಶಗಳ ನಡುವೆ ಸಂಬಂಧ ಹಳಸಿರುವ ಬೆನ್ನಲ್ಲೇ ಪಾಕ್ ಅನುಮತಿ ನಿರಾಕರಿಸಿದೆ.
ಕೆಲವು ದಿನಗಳ ಮೊದಲು ಭಾರತದ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಪ್ರಯಾಣಕ್ಕೂ ಪಾಕ್ ಅನುಮತಿ ನೀಡಿರಲಿಲ್ಲ. ಪ್ರಧಾನಿ ಮೋದಿಗೆ ಸೆಪ್ಟೆಂಬರ್ 21 ರಂದು ಜರ್ಮನಿಗೆ ತೆರಳಿ, ಸೆಪ್ಟೆಂಬರ್ 28 ರಂದು ವಾಪಸ್ಸಾಗಲು ಭಾರತ ಅನುಮತಿ ಕೇಳಿತ್ತು. ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಭಾರತದ ಮನವಿಯನ್ನು ತಿರಸ್ಕರಿಸಿದ್ದೇವೆ ಎಂದಿದ್ದಾರೆ.