ಇಸ್ಲಾಮಾಬಾದ್: ಪಾಕಿಸ್ತಾನ ಸಂಸದರ ಪೈಕಿ ಕೆಲವೇ ಮಂದಿ ಹಿಂದೂ ಧರ್ಮಕ್ಕೆ ಸೇರಿದ ಸಂಸದರಿದ್ದಾರೆ. ಅಂತಹವರಲ್ಲಿ ಒಬ್ಬರಾದ ಲಾಲ್ ಚಂದ್ ಮಾಲ್ಹಿ ಅಲ್ಪಸಂಖ್ಯಾತರ ಮತಾಂತರ ಬಗ್ಗೆ ಮಾತನಾಡಲು ಹೋಗಿ ಟೀಕೆಗೆ ಗುರಿಯಾಗಿದ್ದಾರೆ.
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳನ್ನು ಬಲವಂತವಾಗಿ ಮತಾಂತರ ಮಾಡುತ್ತಿರುವುದರ ವಿರುದ್ಧ ಸಂಸದ ಲಾಲ್ ಚಂದ್ ಧ್ವನಿಯೆತ್ತಿದ್ದರು.
ಮತಾಂತರ ವಿರೋಧಿಸಿದ ಲಾಲ್ ಚಂದ್ ರನ್ನು ಅಲ್ಲಿನ ಕೆಲವು ಸಂಪ್ರದಾಯವಾದಿ ಗುಂಪುಗಳು ವಿರೋಧಿಸಿವೆ. ಅಷ್ಟೇ ಅಲ್ಲದೆ, ಸಂಸದನನ್ನು ಭಾರತದ ಗುಪ್ತಚರ ಸಂಸ್ಥೆ ‘ರಾ’ ಏಜೆಂಟ್ ಎಂದು ಜರೆದಿದೆ.