ಇಸ್ಲಾಮಾಬಾದ್: ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರದೊಂದಿಗೆ ವ್ಯವಹರಿಸುವಲ್ಲಿ ಪಾಕಿಸ್ತಾನ ಸಂಪೂರ್ಣವಾಗಿ ಎಡವಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.
ಇದಕ್ಕೆ ಇತ್ತೀಚೆಗಿನ ಪ್ರಧಾನಿ ಮೋದಿಯ ಅಮೆರಿಕಾ ಪ್ರವಾಸವೇ ಉದಾಹರಣೆ ಎಂದು ಪತ್ರಿಕೆ ಹೇಳಿದೆ. ಇಷ್ಟು ದಿನ ಎರಡೂ ದೇಶಗಳೊಂದಿಗೆ ಸಮ ಸಂಬಂಧ ಹೊಂದಿದ್ದ ಅಮೆರಿಕಾ ಈಗ ಸಂಪೂರ್ಣವಾಗಿ ಭಾರತದ ಕಡೆಗೆ ವಾಲಿದೆ ಎಂದು ಅದು ವಿಶ್ಲೇಷಿಸಿದೆ.
‘ರಾಜಕೀಯ, ಸೇನೆ, ವ್ಯವಹಾರ ಸೇರಿದಂತೆ ಎಲ್ಲಾ ವಿಚಾರಗಳಲ್ಲೂ ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರದೊಂದಿಗೆ ವ್ಯವಹರಿಸಲು ಪಾಕಿಸ್ತಾನದ ಪಿಎಂಎಲ್-ಎನ್ ಸರ್ಕಾರ ಎಡವಿದೆ. ಮೋದಿ ಯುಗದಲ್ಲಿ ಪಾಕ್ ತೊಳಲಾಡುತ್ತಿದೆ’ ಎಂದು ಪತ್ರಿಕೆ ಬರೆದುಕೊಂಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ