ಇಸ್ಲಾಮಾಬಾದ್ : ಸೇನಾ ವಿರೋಧಿ ಹೇಳಿಕೆ ನೀಡಿ ಬಳಿಕ ಟೀಕೆಗೆ ಗುರಿಯಾದ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು, ಪಾಕಿಸ್ತಾನದ ಸೇನೆ ಬಲವಾಗಿರಬೇಕೆಂದೇ ತಮ್ಮ ಪಕ್ಷ ಬಯಸುತ್ತದೆ.
ನನ್ನ ಹೇಳಿಕೆಯಿಂದ ಪ್ರಬಲ ಪಡೆಗೆ ಹಾನಿ ಮಾಡುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನವನ್ನು ಹೋಲಿಕೆ ಮಾಡಿದ ಹಿನ್ನೆಲೆ ಇಮ್ರಾನ್ ಖಾನ್ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಇದಕ್ಕಾಗಿ ಇಮ್ರಾನ್ ಖಾನ್ ತಮ್ಮ ಹೇಳಿಕೆ ಪಾಕಿಸ್ತಾನದ ಮನಸ್ಥಿತಿಗೆ ಹಾನಿ ಮಾಡುವ ಉದ್ದೇಶ ಹೊಂದಿಲ್ಲ. ಆದರೆ ಇದನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.