ಪಶ್ಚಿಮ ದೇಶಗಳು ಮಾಸ್ಕೋವನ್ನು ಪ್ರತ್ಯೇಕಿಸಲು ಪ್ರಯತ್ನಿಸುತ್ತಿರುವಾಗಲೂ ಭಾರತೀಯ ತೈಲ ಸಂಸ್ಕರಣಾ ಘಟಕಗಳು ರಷ್ಯಾದ ತೈಲವನ್ನು ರಿಯಾಯಿತಿಯಲ್ಲಿ ಖರೀದಿಸುವುದನ್ನು ಮುಂದುವರೆಸಿವೆ ಎಂದು ವರದಿಗಳು ತಿಳಿಸಿವೆ.
ಉಕ್ರೇನ್ ಮೇಲೆ ಯುದ್ಧ ಸಾರಿದ್ದಕ್ಕಾಗಿ ರಷ್ಯಾ ಮೇಲೆ ಪಾಶ್ಚಾತ್ಯ ರಾಷ್ಟ್ರಗಳು ನಿರ್ಬಂಧ ಹೇರಿರುವುದರ ನಡುವೆ ರಷ್ಯಾದಿಂದ ಭಾರತದ ತೈಲ ಕಂಪನಿಗಳು ಸೋವಿ ಬೆಲೆಗೆ ತೈಲ ಖರೀದಿಸಿರುವುದನ್ನು ಭಾರತ ಸರ್ಕಾರ ಸಮರ್ಥಿಸಿಕೊಂಡಿತ್ತು. ಈ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾದ ಟೀಕೆಗೆ ಸರ್ಕಾರದ ಮೂಲಗಳು ತಿರುಗೇಟು ಕೂಡ ನೀಡಿತ್ತು.
ಭಾರತದ ಕಾನೂನುಬದ್ಧ ಇಂಧನ ವ್ಯವಹಾರವನ್ನು ಯಾರೂ ರಾಜಕೀಕರಣಗೊಳಿಸಬಾರದು. ತಮಗೆ ಬೇಕಾದ ತೈಲವನ್ನು ತಾವೇ ಉತ್ಪಾದಿಸಿಕೊಳ್ಳುವ ತೈಲಸಮೃದ್ಧ ದೇಶಗಳು ಅಥವಾ ಸ್ವತಃ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳು ಈಗ ಏಕಾಏಕಿ ಆಮದು ನಿರ್ಬಂಧದ ಪರ ವಕ್ತಾರರಂತೆ ಮಾತನಾಡುವುದು ಸಲ್ಲದು ಎಂದು ಭಾರತ ಸರ್ಕಾರದ ಮೂಲಗಳು ಹೇಳಿವೆ.
ಭಾರತದ ಸರ್ಕಾರದ ಅಧಿಕಾರಿಯೊಬ್ಬರು ಕಳೆದ ವಾರ, ವಿಶ್ವದ ಮೂರನೇ ಅತಿದೊಡ್ಡ ಕಚ್ಚಾ ತೈಲದ ಗ್ರಾಹಕರು ಅದರ ಸುಮಾರು 85 ಪ್ರತಿಶತದಷ್ಟು ಅಗತ್ಯಗಳಿಗಾಗಿ ಆಮದುಗಳನ್ನು ಅವಲಂಬಿಸಿದ್ದಾರೆ, ರಷ್ಯಾವು ಅದರಲ್ಲಿ ಒಂದು ಶೇಕಡಾಕ್ಕಿಂತ ಕಡಿಮೆ ತೈಲವನ್ನು ಪೂರೈಸುತ್ತದೆ ಎಂದು ಹೇಳಿದರು.