ಜಗತ್ತಿಗೇ ದೊಡ್ಡಣ್ಣ ಎಂದು ಬೀಗುವ ಅಮೆರಿಕಕ್ಕೇ ದಂಗು ಬಡಿಸಿರುವ ಉತ್ತರ ಕೊರಿಯಾ ರಾಷ್ಟ್ರ ಇದೀಗ ಮತ್ತೊಂದು ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸುವ ಮೂಲಕ ಮತ್ತೊಮ್ಮೆ ಸೆಡ್ಡು ಹೊಡೆದಿದೆ.
ಈ ಖಂಡಾಂತರ ಕ್ಷಿಪಣಿಯ ಮೂಲಕ ಅಮೆರಿಕದ ಪಶ್ಚಿಮ ಕರಾವಳಿಯ ಲಾಸ್ ಏಂಜಲೀಸ್, ಷಿಕಾಗೋ ನಗರಗಳೂ ಉತ್ತರ ಕೊರಿಯಾದ ಶಸ್ತ್ರಾಸ್ತ್ರಗಳ ಗುರಿಯಲ್ಲಿಯಲ್ಲಿರಲಿದ್ದು, ಬಹುತೇಕ ಅಮೆರಿಕದ ನಗರಗಳನ್ನ ಅಣ್ವಸ್ತ್ರಗಳಿಂದ ಉಡಾಯಿಸುವ ಸಾಮರ್ಥ್ಯ ನಮಗೆ ಬಂದಿದೆ ಎಂದು ಅಧ್ಯಕ್ಷ ಕಿಮ್ ಜೋಂಗ್ ಉನ್ ಬೀಗಿದ್ಧಾರೆ.
ಕೇವಲ 3 ವಾರಗಳ ಅಂತರದಲ್ಲಿ ಉತ್ತರ ಕೊರಿಯಾ 2ನೇ ಖಂಡಾಂತರ ಕ್ಷಿಪಣಿ(ICBM) ಪರೀಕ್ಷೆ ನಡೆಸಿದ್ದು, ಕೇವಲ 47 ನಿಮಿಷಗಳಲ್ಲಿ ಈ ಕ್ಷಿಪಣಿ 3,724 ಕಿಮೀ ತಲುಪಿದೆಯಂತೆ. ಅಂದರೆ ಬಹುತೇಕ ಮೆರಿಕದ ಪಶ್ಚಿಮ ಕರಾವಳಿಯ ನಗರಗಳನ್ನ ತಲುಪುವಷ್ಟು ಸಾಮರ್ಥ್ಯ ಹೊಂದಿದೆ.
ಎಚ್ ಡಬ್ಲ್ಯೂಸಾಂಗ್-14 ಖಂಡಾಂತರ ಕ್ಷಿಪಣಿ ಪರೀಕ್ಷೆ ಬಳಿಕ ಕಿಮ್ ಅತ್ಯಂತ ತೃಪ್ತಿ ವ್ಯಕ್ತಪಡಿಸಿದ್ದು, ಶುಕ್ರವಾರ ರಾತ್ರಿ ಸ್ವತಃ ಕಿಮ್ ಮಾರ್ಗದರ್ಶನದಲ್ಲಿ ಕ್ಷಿಪಣಿ ಪರೀಕ್ಷೆ ನಡೆದಿದೆ. ಅಮೆರಿಕದ ಪಶ್ಚಿಮ ಕರಾವಳಿಯ ಯಾವುದೇ ಪ್ರದೇಶವನ್ನ ಉಡಾಯಿಸುವ ಸಾಮರ್ಥ್ಯ ಈ ಕ್ಷಿಪಣಿ ಹೊಂದಿದೆ. ಉತ್ತರ ಕೊರಿಯಾದ ಈ ಪರೀಕ್ಷೆ ಅಮೆರಿಕಕ್ಕೆ ಎಚ್ಚರಿಕೆ ಗಂಟೆಯಾಗಿದ್ದು, ಡೊನಾಲ್ಡ್ ಟ್ರಂಪ್ ಮುಂದಿನ ನಡೆ ಕುತೂಹಲ ಮೂಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ