ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡ ಆರ್ಡರ್ನ್ (37) ತಮ್ಮ ಚೊಚ್ಚಲ ಮಗುವಿನ ಪ್ರತೀಕ್ಷೆಯಲ್ಲಿದ್ದಾರೆ. ಇನ್ನೂ ಒಂದು ವಿಶೇಷ ಸಂಗತಿ ಏನೆಂದರೆ, ಜೆಸಿಂಡ ಆರ್ಡರ್ನ್ ಅವರು ಅಧಿಕಾರದಲ್ಲಿದ್ದಾಗ ಮಗುವಿಗೆ ಜನ್ಮ ನೀಡಿದ ದೇಶದ ಮೊದಲ ಪ್ರಧಾನಿ ಎನ್ನುವ ಗೌರವಕ್ಕೂ ಪಾತ್ರರಾಗಲಿದ್ದಾರೆ.
ಪತಿ ಕ್ಲಾರ್ಕ್ ಗೇಫೋರ್ಡ್ ಜೊತೆಗೂಡಿ ಈ ಖುಷಿಯ ವಿಷಯವನ್ನು ಹಂಚಿಕೊಂಡಿರುವ ಜೆಸಿಂಡ ಅವರು ಜೂನ್ ವೇಳೆಗೆ ನಮ್ಮ ಮಗುವನ್ನು ಸ್ವಾಗತಿಸಲಿದ್ದೇವೆ ಎಂದು ತಿಳಿಸಿದ್ದಾರೆ. ‘ಮಗುವಿನ ಜನನದ ನಂತರ ಆರು ವಾರ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತೇನೆ. ಈ ಸಂದರ್ಭದಲ್ಲಿ ಉಪ ಪ್ರಧಾನಿ ವಿನ್ಸ್ಟನ್ ಪೀಟರ್ಸ್ ಪ್ರಧಾನಿ ಹುದ್ದೆಯ ಉಸ್ತುವಾರಿ ವಹಿಸಿಕೊಳ್ಳುತ್ತಾರೆ’ ಎಂದು ತಿಳಿಸಿದ್ದಾರೆ.
ಮಗು ಹೊಂದುವ ಉದ್ದೇಶವಿದೆಯೇ ಎಂದು ಚುನಾವಣಾ ಪ್ರಚಾರ ವೇಳೆ ಜೆಸಿಂಡಾ ಅವರಿಗೆ ಕೇಳಿದ್ದ ಪ್ರಶ್ನೆಗೆ, ಗರ್ಭ ಧಾರಣೆ ಮಹಿಳೆಯ ಉದ್ಯೋಗಾವಕಾಶದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅವರು ಉತ್ತರಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ