ಫುಜೈರಾ(ಯುಎಇ) : ಸಮುದ್ರ ಕಿನಾರೆಗೆ ಹೋಗುವ ಜನರ ಸುರಕ್ಷತೆಗಾಗಿ ಫುಜೈರಾ ಪೊಲೀಸರು ಹೊಸ ರೀತಿಯ ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಅದೇನೆಂದರೆ ನೆರಳಿಗಾಗಿ ಸಾಲಾಗಿ ಕೊಡೆಗಳನ್ನು ಅಳವಡಿಸಲಾಗಿರುವ ಯುಎಇ ಸಮುದ್ರ ಕಿನಾರೆಯಲ್ಲಿ ವಾಹನಗಳು ಮತ್ತು ಮೋಟರ್ ಸೈಕಲ್ಗಳನ್ನು ಚಲಾಯಿಸಬಾರದು. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸುವವರಿಗೆ 1,000 ದಿರ್ಹಮ್ (ಸುಮಾರು 18,500 ರೂಪಾಯಿ) ದಂಡ ವಿಧಿಸಲಾಗುವುದು ಹಾಗೂ 8 ಋಣಾತ್ಮಕ ಅಂಕಗಳನ್ನು ನೀಡಲಾಗುವುದು. ಅಂಥವರ ವಾಹನಗಳನ್ನು 7 ದಿನಗಳ ಅವಧಿಗೆ ಮುಟ್ಟುಗೋಲು ಹಾಕಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಹಾಗೇ ಈ ನಿಯಮವನ್ನು ಜಾರಿಗೊಳಿಸುವುದಕ್ಕಾಗಿ ಪೊಲೀಸ್ ಗಸ್ತು ತಂಡಗಳನ್ನು ಕಳುಹಿಸಲಾಗುವುದು ಎಂಬುದಾಗಿ ಪೊಲೀಸರು ತಮ್ಮ 'ಇನ್ಸ್ಟಾಗ್ರಾಂ' ಖಾತೆಯಲ್ಲಿ ಹಾಕಿದ ಸಂದೇಶದ ಮೂಲಕ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ