ನವದೆಹಲಿ:ಮೊಟ್ಟ ಮೊದಲಬಾರಿಗೆ ಚಂದ್ರಯಾನ ಕೈಗೊಂಡಿದ್ದ ಗಗನಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರನಿಂದ ಭೂಮಿಗೆ ತಂದಿದ್ದ ಚಂದ್ರನ ಧೂಳು ಬರೋ ಬ್ಬರಿ 11.7 ಕೋಟಿ ರೂ.ಗೆ ಹರಾಜಾಗಿದೆ.
ಹೀಗೆ ತಂಡ ಚಂದ್ರನ ಧೂಳನ್ನು ಒಂದು ಪುಟ್ಟ ಬಿಳಿ ಚೀಲದಲ್ಲಿ ಇಡಲಾಗಿತ್ತು. ಇದನ್ನು ಜಾನ್ಸನ್ ಸ್ಪೇಸ್ ಸೆಂಟರ್‌ನಲ್ಲಿ ಇರಿಸಲಾಗಿತ್ತು. ಅಲ್ಲಿಂದ ಇದು ಕಳವಾಗಿತ್ತು. 10 ವರ್ಷಗಳ ಬಳಿಕ 2014ರಲ್ಲಿ ಈ ಚೀಲ ಕನ್ಸಾಸ್ ವಸ್ತುಸಂಗ್ರಹಾಲಯದ ಮ್ಯಾನೇ ಜರ್‌ರ ಗ್ಯಾರೇಜ್‌ನಲ್ಲಿ ಪತ್ತೆಯಾಗಿತ್ತು. ಆತನೇ ಈ ಚೀಲ ಕದ್ದಿದ್ದ ಎಂಬ ಆರೋ ಪವು ಸಾಬೀತಾಗಿತ್ತು.
ಇದರ ಐತಿಹಾಸಿಕ ಮಹತ್ವ ಅರಿತ ಟಾರ್ನಿ ನ್ಯಾನ್ಸಿ ಲೀ ಕಾರ್ಲ್ಸನ್, 2015ರಲ್ಲಿ ಖರೀದಿಸಿದ್ದರು. ಈಗ ಇದು ಮತ್ತೆ ಹರಾಜಿನಲ್ಲಿ 11.7ಕೋಟಿ ರೂ ಗೆ ಮಾರಾಟವಾಗಿದೆ.