Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರಧಾನಿ ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಪಾಕ್ ಪ್ರಧಾನಿ

ಪ್ರಧಾನಿ ಪಟ್ಟ ಕಳೆದುಕೊಳ್ಳುವ ಭೀತಿಯಲ್ಲಿ ಪಾಕ್ ಪ್ರಧಾನಿ
ಇಸ್ಲಾಮಾಬಾದ್ , ಶುಕ್ರವಾರ, 14 ಜುಲೈ 2017 (07:43 IST)
ಇಸ್ಲಾಮಾಬಾದ್:ಪಾಕಿಸ್ತಾನ ಪ್ರಧಾನಿ ನವಾಜ್ ಷರೀಪ್ ಅವರಿಗೆ ಬ್ರಷ್ಟಾಚಾರ ಹಗರಣದ ಕುಣಿಕೆ ಬಿಗಿಗೊಂಡಿದ್ದು, ಅಧಿಕಾರಕ್ಕೆ ಕುತ್ತಾಗಿ ಪರಿಣಮಿಸಿದೆ. ವಿದೇಶಗಳಲ್ಲಿ ಅಕ್ರಮ ಹೂಡಿಕೆಯಲ್ಲಿ ತೊಡಗಿರುವುದನ್ನು ಜಂಟಿ ತನಿಖಾ ತಂಡ ದೃಢ ಪಡಿಸಿದೆ. ಈ ಹಿನ್ನಲೆಯಲ್ಲಿ ಪಾಕ್ ಪ್ರಧಾನಿ ಅಧಿಕಾರ ತ್ಯಜಿಸುವುದು ಅನಿವಾರ್ಯವಾಗಿದೆ.
 
ಆದರೆ ನವಾಜ್ ಷರೀಫ್ ತಮ್ಮ ರಾಜೀನಾಮೆ ಬೇಡಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಇದರೊಂದಿಗೆ ಪಾಕಿಸ್ತಾನ ರಾಜಕೀಯದಲ್ಲಿ ಕ್ಷಿಪ್ರಧಂಗೆ ಉಂಟಾಗುವ ಭೀತಿ ಎದುರಾಗಿದೆ. ಪನಾಮ ಪ್ರಕರಣದಲ್ಲಿ ನವಾಜ್ ಶರೀಫ್ ಮತ್ತು ಕುಟುಂಬದ ವಿರುದ್ಧ ಜಂಟಿ ತನಿಖಾ ತಂಡ ನೀಡಿದ ವರದಿ ಮತ್ತು ಅದನ್ನು ಅನುಸರಿಸಿ ವಿಪಕ್ಷಗಳು ರಾಜೀನಾಮೆಗೆ ಪಟ್ಟು ಹಿಡಿದಿದ್ದವು. ಆದರೆ ನವಾಜ್ ಷರೀಫ್ ಈಗ ರಾಜೀನಾಮೆಯನ್ನು ನಿರಾಕರಿಸಿರುವ ಹಿನ್ನಲೆಯಲ್ಲಿ ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಾಗುವುದು ಬಹುತೇಕ ಖಚಿತವಾಗಿದೆ.
 
ಈ ನಡುವೆ ತುರ್ತು ಸಂಪುಟ ಸಭೆ ಕರೆದ ನವಾಜ್ ಷರೀಫ್ ಗೆ ಸಂಪುಟ ಸದಸ್ಯರು ಬೆಂಬಲ ನೀಡಿದ್ದು, ಪಾಕಿಸ್ತಾನದ ಜನತೆ ನನ್ನನ್ನು ಆಯ್ಕೆ ಮಾಡಿದ್ದು, ಅವರು ಮಾತ್ರ ನನ್ನ ಹುದ್ದೆಯಿಂದ ಕೆಳಗಿಳಿಸಲು ಸಾಧ್ಯ ಎಂದಿದ್ದಾರೆ. ಅಲ್ಲದೇ ರಾಜೀನಾಮೆ ನೀಡುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಯವರಿಗೆ ಕರಾವಳಿಯಲ್ಲಿ ಶಾಂತಿ ನೆಲೆಸುವುದು ಬೇಡವಾಗಿದೆ: ಟಿ.ಬಿ.ಜಯಚಂದ್ರ