Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪಾಕ್ ಪ್ರಧಾನಿ ನವಾಜ್ ಷರೀಫ್ ಮಗಳು, ಅಳಿಯನ ಬಂಧನ

ಪಾಕ್ ಪ್ರಧಾನಿ ನವಾಜ್ ಷರೀಫ್ ಮಗಳು, ಅಳಿಯನ ಬಂಧನ
ಪಾಕಿಸ್ತಾನ , ಸೋಮವಾರ, 9 ಅಕ್ಟೋಬರ್ 2017 (14:07 IST)
ಪಾಕಿಸ್ತಾನ: ಪಾಕ್ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಪದಚ್ಯುತ ಪಾಕ್‌ ಪ್ರಧಾನಿ ನವಾಜ್‌ ಷರೀಫ್ ಮಗಳು ಮರ್ಯಾಮ್‌ ನವಾಜ್‌ ಮತ್ತು ಅಳಿಯ, ಮಾಜಿ ಸೇನಾ ಮುಖ್ಯಸ್ಥ ಮಹಮ್ಮದ್‌ ಸಫ್ದರ್‌ ನನ್ನು ಬೆನಜಿರ್ ಭುಟ್ಟೊ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ನವಾಜ್ ಷರೀಫ್ ಅಳಿಯನ ವಿರುದ್ಧ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಲಂಡನ್ ನಿಂದ ಬಂದಿಳಿದ ಇವರನ್ನು ಎನ್‌ಎಬಿ ವಶಕ್ಕೆ ಪಡೆದಿದೆ. ಸೆ.8 ರಂದು ಪಾಕ್ ನ ಎನ್‌ಎಬಿ ಪ್ರಧಾನಿ ನವಾಜ್‌ ಷರೀಫ್, ಪುತ್ರಿ ಮರ್ಯಾಮ್‌, ಅಳಿಯ ಸಫ್ದರ್‌, ಪುತ್ರರಾದ ಹುಸೇನ್‌ ಮತ್ತು ಹಸನ್‌ ಹಾಗೂ ವಿರುದ್ಧ ಭ್ರಷ್ಟಾಚಾರಕ್ಕೆ ಸಂಬಂಧಿದಿದಂತೆ ದೂರು ದಾಖಲಿಸಿತ್ತು.

ಲಂಡನ್ ನಲ್ಲಿ ಪಾಕ್ ಪ್ರಧಾನಿ ನವಾಜ್‌ ಷರೀಫ್ ಕುಟುಂಬ ಹೊಂದಿರುವ ಆಸ್ತಿಪಾಸ್ತಿ ಬಗ್ಗೆ ತನಿಖೆ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಭಷ್ಟಾಚಾರ ನಿಗ್ರಹ ದಳದ ನ್ಯಾಯಮಂಡಳಿ ಎದುರು ವಿಚಾರಣೆಗೆ ಹಾಜರಾಗಲು ಷರೀಫ್ ಮಗಳು ಮತ್ತು ಅಳಿಯ ಲಂಡನ್‌ನಿಂದ ಇಲ್ಲಿಗೆ ಆಗಮಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್