300ಕ್ಕೂ ಹೆಚ್ಚು ಹಿಮಸಾರಂಗಗಳು ಸಿಡಿಲು ಬಡಿದು ದಾರುಣ ಸಾವನ್ನಪ್ಪಿದ ಘಟನೆ ದಕ್ಷಿಣ ನಾರ್ವೆಯಲ್ಲಿ ಸಂಭವಿಸಿರುವುದಾಗಿ ನಾರ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಹರ್ಡನ್‌ಗೆರ್‌ವಿಡ್ಡಾ ಪ್ರಸ್ಥಭೂಮಿಯಲ್ಲಿ 70 ಮರಿಗಳು ಸೇರಿದಂತೆ 323 ಹಿಮಸಾರಂಗಗಳು ಮೃತಸ್ಥಿತಿಯಲ್ಲಿರುವುದನ್ನು ಗೇಮ್‌ಕೀಪರ್ ಪತ್ತೆಹಚ್ಚಿದರು. ಹರ್ಡನ್‌ಗೇರ್‌ವಿಡ್ಡಾದಲ್ಲಿ ಯುರೋಪಿನ ಸುಮಾರು 10,000 ವನ್ಯ ಹಿಮಸಾರಂಗ ಮುಕ್ತವಾಗಿ ಸಂಚರಿಸುತ್ತವೆ.
ಟೆಲಿವಿಷನ್ ದೃಶ್ಯದಲ್ಲಿ ಹಿಮಸಾರಂಗಗಳ ಮೃತದೇಹಗಳು ಮೃತಸ್ಥಿತಿಯಲ್ಲಿ ನೆಲದ ಮೇಲೆ ಒಟ್ಟಿಗೆ ಬಿದ್ದಿರುವುದನ್ನು ತೋರಿಸಿದೆ. ಶುಕ್ರವಾರ ಈ ಪ್ರದೇಶದಲ್ಲಿ ಬಲವಾದ ಬಿರುಗಾಳಿ ಬೀಸಿತ್ತು. ಪ್ರಾಣಿಗಳು ಕೆಟ್ಟ ಹವೆಯಲ್ಲಿ ಒಟ್ಟಿಗೆ ಕಲೆತಿದ್ದು ಸಿಡಿಲು ಬಡಿದಿದ್ದರಿಂದ ಮೃತಪಟ್ಟಿವೆ ಎಂದು ನಾರ್ವೆ ಪರಿಸರ ಏಜನ್ಸಿ ತಿಳಿಸಿದೆ. ಪ್ರಕೃತಿ ವಿಕೋಪಕ್ಕೆ ಮುಗ್ಧ ಜೀವಿಗಳು ಸಾವಿನಲ್ಲೂ ಒಂದಾಗಿ ಮಲಗಿರುವ ದೃಶ್ಯ ಹೃದಯಕಲಕುವಂತಿದೆ.
ನಾರ್ವೆಯಲ್ಲಿ ಸುಮಾರು 25,000 ವನ್ಯ ತಂಡ್ರಾ ಹಿಮಸಾರಂಗಗಳು ದಕ್ಷಿಣ ಪರ್ವತ ಪ್ರದೇಶಗಳಲ್ಲಿವೆ ಎಂದು ತಜ್ಞರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ