ಲಂಡನ್ : ಬ್ರಿಟನ್ ಅನ್ನು ಹೊಡೆದುರುಳಿಸಲು ಕ್ಷಿಪಣಿಯನ್ನು ಕಳುಹಿಸಬಲ್ಲೆ ಎಂದು ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಒಂದು ಬಾರಿ ಹೇಳಿಕೆ ನೀಡಿರುವುದಾಗಿ ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿಕೊಂಡಿದ್ದಾರೆ.
ಈ ವಿಚಾರ ಬಿಬಿಸಿಯ ಪುಟಿನ್ ವಿ ದಿ ವೆಸ್ಟ್ ಹೆಸರಿನ 3 ಭಾಗಗಳ ಸಾಕ್ಷ್ಯಚಿತ್ರದಲ್ಲಿ ಬಹಿರಂಗವಾಗಿದೆ. ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗುವುದಕ್ಕೂ ಮೊದಲು ಜಾನ್ಸನ್ ಅವರೊಂದಿಗಿನ ದೂರವಾಣಿ ಕರೆಯಲ್ಲಿ ಮಾತನಾಡುತ್ತಿದ್ದಾಗ, ಬ್ರಿಟನ್ ಅನ್ನು ಹೊಡೆದುರುಳಿಸಲು ಒಂದೇ ನಿಮಿಷ ಸಾಕು. ನಾವು ಕ್ಷಿಪಣಿ ಕಳುಹಿಸಬಲ್ಲೆವು ಎಂದು ಬೆದರಿಕೆ ಹಾಕಿದ್ದಾಗಿ ಹೇಳಿಕೊಂಡಿದ್ದಾರೆ.
ಜಾನ್ಸನ್ ಪುಟಿನ್ ಅವರ ಹೇಳಿಕೆಯನ್ನು ಬೆದರಿಕೆ ಎಂದು ಪರಿಗಣಿಸದೇ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಬೆಂಬಲಿಸಿದ್ದಾರೆ.